ಕುಂಬಳೆ: ಕಂಚಿಕಟ್ಟೆ ರಾಂ ನಗರ ನಿವಾಸಿ ತುಕಾರಾಮ್ (66) ನಿನ್ನೆ ರಾತ್ರಿ ನಿಧನಹೊಂದಿದರು. ಕುಂಬಳೆ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಮಾಜಿ ಅಧ್ಯಕ್ಷ, ಕುಂಬಳೆ ಸೇವಾ ಸಹಕಾರಿ ಬ್ಯಾಂಕ್‌ನ ಮಾಜಿ ನಿರ್ದೇಶಕರೂ, ಕ್ಯಾಂಪ್ಕೋದ ನಿವೃತ್ತ ಉದ್ಯೋ ಗಿಯೂ ಆಗಿದ್ದಾರೆ. ಮೃತರು ಪತ್ನಿ ಸೌಮ್ಯ ಟೀಚರ್, ಮಗ ಕುಲ್ ದೀಪ್, ಸೊಸೆ ನಿಶ್ಮಿತಾ, ಓರ್ವ ಸಹೋದರಿ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.
