ಕಾಸರಗೋಡು ನಗರದ ಬ್ಯಾಂಕ್ ರಸ್ತೆ ಶೋಚನೀಯಾವಸ್ಥೆ: ಬಿಎಂಎಸ್‌ನಿಂದ ಚಳವಳಿ

ಕಾಸರಗೋಡು:  ಕಾಸರಗೋಡು ನಗರದ ಬ್ಯಾಂಕ್ ರಸ್ತೆಯ ಶೋಚನೀ ಯಾವಸ್ಥೆಗೆ ಪರಿಹಾರ ಕ್ರಮ ಕೈಗೊಳ್ಳದೆ ನಿರ್ಲಕ್ಷ್ಯನೀತಿ ಅನುಸರಿಸು ತ್ತಿರುವ ಅಧಿಕಾರಿಗಳ ಕ್ರಮವನ್ನು ಪ್ರತಿಭಟಿಸಿ  ಬಿಎಂಎಸ್ ಕಾಸರಗೋಡು ವಲಯ ಸಮಿತಿ ವತಿಯಿಂದ ಇಂದು ಬೆಳಿಗ್ಗೆ ದಿಗ್ಬಂಧನ ಚಳವಳಿ ನಡೆಸಲಾಯಿತು. ಬಿಎಂಎಸ್ ಜಿಲ್ಲಾ ಕಚೇರಿ ಬಳಿಯಿಂದ ಪ್ರತಿಭಟನಾ ಮೆರವಣಿಗೆ ಆರಂಭಗೊಂ ಡಿದ್ದು, ಬಳಿಕ ಏರ್‌ಲೈನ್ಸ್ ಜಂಕ್ಷನ್‌ನಲ್ಲಿ ಚಳವಳಿ ನಡೆಸಲಾಯಿತು.  ಬಿಎಂಎಸ್ ಜಿಲ್ಲಾಧ್ಯಕ್ಷ ಉಪೇಂದ್ರ ಕೋಟೆಕಣಿ ಉದ್ಘಾಟಿಸಿದರು.  ಜಿಲ್ಲಾ ಕಾರ್ಯದರ್ಶಿ ಕೆ.ವಿ. ಬಾಬು, ನೇತಾರರಾದ ದಿನೇಶ್ ಬಂಬ್ರಾಣ, ಕುಂಞಿಕಣ್ಣನ್, ಹರೀಶ್ ಕುದ್ರೆಪ್ಪಾಡಿ, ಕೇಶವ, ಉಮೇಶ್, ವಿಶ್ವನಾಥ ಶೆಟ್ಟಿ, ಬಾಲಕೃಷ್ಣ ನೆಲ್ಲಿಕುಂಜೆ ಮೊದಲಾದವರು ನೇತೃತ್ವ ವಹಿಸಿದರು.  ನಗರದ  ಕರಂದಕ್ಕಾಡ್‌ನಿಂದ ರೈಲ್ವೇ ನಿಲ್ದಾಣಕ್ಕೆ ತೆರಳುವ ರಸ್ತೆ  ಶೋಚನೀಯ ಸ್ಥಿತಿಗೆ ತಲುಪಿದರೂ ಅದರ ದುರಸ್ತಿಗೆ ಕ್ರಮ ಕೈಗೊಳ್ಳದಿರುವುದು ವ್ಯಾಪಕ ಪ್ರತಿಭಟನೆಗೆ ಕಾರಣವಾಗಿದೆ.

You cannot copy contents of this page