ಪೆರಡಾಲ ಶ್ರೀ ಉದನೇಶ್ವರ ದೇವಸ್ಥಾನದಲ್ಲಿ ಅನುಜ್ಞಾಕಲಶ, ಬಾಲಾಲಯ ಪ್ರತಿಷ್ಠೆ ನಾಳೆಯಿಂದ

ಬದಿಯಡ್ಕ: ಪೆರಡಾಲ ಶ್ರೀ ಉದನೇಶ್ವರ ದೇವಸ್ಥಾನದಲ್ಲಿ ಅನುಜ್ಞಾಕಲಶ, ಬಾಲಾಲಯ ಪ್ರತಿಷ್ಠೆ, ಶಕ್ತಿಪಂಚಾಕ್ಷರಿ ಯಾಗ ನಾಳೆ, 16, 17ರಂದು ಜರಗಲಿದೆ. ಗರ್ಭಗುಡಿ ಹಾಗೂ ಒಳಾಂಗಣ ನವೀಕರಣ ಕೆಲಸಗಳಿಗೆ ಪೂರ್ವಭಾವಿಯಾಗಿ ಅನುಜ್ಞಾ ಕಲಶ, ಬಾಲಾಲಯ ಪ್ರತಿಷ್ಠೆ, ಶಕ್ತಿಪಂಚಾಕ್ಷರಿ ಯಾಗ ಕಾರ್ಯಕ್ರಮಗಳು ಬ್ರಹ್ಮಶ್ರೀ ರವೀಶತಂತ್ರಿ ಕುಂಟಾರು ಇವರ ನೇತೃತ್ವದಲ್ಲಿ ನಡೆಯಲಿದೆ.
ನಾಳೆ ಸಂಜೆ 6ರಿಂದ ವಿವಿದ ವೈದಿಕ ಕಾರ್ಯಕ್ರಮ, 16ರಂದು ಬೆಳಗ್ಗೆ 5ರಿಂದ ಗಣಪತಿ ಹೋಮ, ಪ್ರಾಯಶ್ಚಿತ್ತ ಹೋಮ, ಶಾಂತಿ ಹೋಮ, ತತ್ವಹೋಮ, ಸಾಯಂಕಾಲ 6ರಿಂದ ಅವಾಸ ಹೋಮ, ಕುಂಭೇಶಕರ್ಕರಿ ಪೂಜೆ, ಪರಿಕಲಶ ಪೂಜೆ, ಬ್ರಹ್ಮಕಲಶ ಪೂಜೆ, ಮಹಾಪೂಜೆ, 17ರಂದು ಪ್ರಾತಃಕಾಲ 3 ಗಂಟೆಯಿAದ ಗಣಪತಿ ಹೋಮ, ಪ್ರತಿಷ್ಠಾ ಪಾಣಿ, 4.09ರಿಂದ ಕರ್ಕಟಕ ಲಗ್ನ ಸುಮುಹೂರ್ತದಲ್ಲಿ ಶ್ರೀದೇವರ ಬಾಲಾಲಯ ಪ್ರತಿಷ್ಠೆ, ಕಲಶಾಭಿಷೇಕ, ಬೆಳಗ್ಗೆ 9ರಿಂದ ಶಕ್ತಿಪಂಚಾಕ್ಷರಿ ಯಾಗ ಆರಂಭ, 11.30ಕ್ಕೆ ಯಾಗ ಪೂರ್ಣಾಹುತಿ, 11.45ಕ್ಕೆ ಧಾರ್ಮಿಕ ಸಭೆ, ಮಧ್ಯಾಹ್ನ 12.30ಕ್ಕೆ ಶ್ರೀದೇವರಿಗೆ ಮಹಾಪೂಜೆ ನಡೆಯಲಿದೆ.

You cannot copy contents of this page