ಕಾಸರಗೋಡು: ಕೇಂದ್ರ ಸಚಿವ ಸುರೇಶ್ ಗೋಪಿಯವರ ತೃಶೂರಿನಲ್ಲಿ ರುವ ಎಂ.ಪಿ. ಕಚೇರಿಯ ನಾಮಫಲಕಕ್ಕೆ ಕರಿ ಆಯಿಲ್ ಸುರಿದು ವಿಕೃತಗೊಳಿಸಿದ ದುಷ್ಕೃತ್ಯವನ್ನು ಪ್ರತಿಭಟಿಸಿ ಬಿಜೆಪಿ ನೇತೃತ್ವದಲ್ಲಿ ನಿನ್ನೆ ಜಿಲ್ಲೆಯಾದ್ಯಂತ ಹಲವೆಡೆಗಳಲ್ಲಿ ಮೆರವಣಿಗೆ ನಡೆಸಲಾಯಿತು.
ಇದರಂತೆ ಬಿಜೆಪಿ ಕಾಸರಗೋಡು ಜಿಲ್ಲಾ ಸಮಿತಿಯ ನೇತೃತ್ವದಲ್ಲಿ ನಿನ್ನೆ ಸಂಜೆ ನಗರದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು. ಸಿಪಿಎಂ, ಕಾಂಗ್ರೆಸ್ನ ವಿರುದ್ಧ ಕಾರ್ಯಕರ್ತರು ಮುಗಿಲು ಮುಟ್ಟುವ ಘೋಷಣೆ ಕೂಗಿದರು. ಬಿಜೆಪಿ ಜಿಲ್ಲಾಧ್ಯಕ್ಷೆ ಪ್ರತಿಭಟನಾ ಮೆರವಣಿಗೆಯನ್ನು ಉದ್ಘಾಟಿಸಿದರು. ಪ್ರಜಾತಂತ್ರ ಸಂರಕ್ಷಣಾ ಆಂದೋಲನ ಎಂಬ ಹೆಸರಲ್ಲಿ ಈ ಪ್ರತಿಭಟನೆ ನಡೆಸಲಾಯಿತು. ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಪಿ. ರಮೇಶ್, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಪಿ.ಆರ್. ಸುನಿಲ್, ಮನುಲಾಲ್ ಮೇಲತ್ತ್, ಸವಿತಾ ಟೀಚರ್, ಜಿಲ್ಲಾ ಕಾರ್ಯದರ್ಶಿ ಪ್ರಮಿಳಾ ಮಜಲ್ ಮಂಡಲ ಅಧ್ಯಕ್ಷ ಗುರುಪ್ರಸಾದ್ ಪ್ರಭು, ಪ್ರಧಾನ ಕಾರ್ಯದರ್ಶಿ ಶ್ರೀಧರ ಕೂಡ್ಲು, ಶೈನಿ ಮೋಳ್, ದಯಾನಂದ ಪೂಜಾರಿ, ವರಪ್ರಸಾದ್ ಕೋಟೆಕಣಿ, ಸುಕುಮಾರ್ ಕುದ್ರೆಪ್ಪಾಡಿ, ಮಾಧವ ಮಾಸ್ತರ್ ಮೊದಲಾದವರು ನೇತೃತ್ವ ನೀಡಿದರು. ಬಿಜೆಪಿ ನಗರ ಕಚೇರಿ ಪರಿಸರದಿಂದ ಆರಂಭಗೊಂಡ ಪ್ರತಿಭಟನಾ ಮೆರವಣಿಗೆ ನಗರ ಪ್ರದಕ್ಷಿಣೆ ನಡೆಸಿದ ಬಳಿಕ ನಗರದ ಹೊಸ ಬಸ್ ನಿಲ್ದಾಣ ಪರಿಸರದಲ್ಲಿ ಸಮಾಪ್ತಿಗೊಂಡಿತು. ಹೊಸದುರ್ಗ ಸೇರಿದಂತೆ ಇತರ ಹಲವೆಡೆಗಳಲ್ಲಿ ಇದೇ ರೀತಿ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು. ಕಾಸರಗೋಡು ಲೋಕಸಭಾ ಕ್ಷೇತ್ರದ ಮತದಾರ ಯಾದಿಯನ್ನು ಪರಿಶೀಲನೆಗೊಳಪಡಿ ಬೇಕೆಂದು ಬಿಜೆಪಿ ಜಿಲ್ಲಾಧ್ಯಕ್ಷೆ ಎಂ.ಎಲ್. ಅಶ್ವಿನಿ ಆಗ್ರಹಪಟ್ಟಿದ್ದಾರೆ.
ಕೋಡೋಂ ಬೇಳೂರು ಪಂಚಾಯತ್ನ ಮತದಾರ ಯಾದಿಯಲ್ಲಿ ಅವ್ಯವಹಾರ ಪತ್ತೆಯಾಗಿದೆ. ಈ ಪಂಚಾಯತ್ನ 10ನೇ ವಾರ್ಡ್ನಲ್ಲಿ ಕಳೆದ ೨೫ ವರ್ಷಗಳಿಂದ ವಾಸವಿಲ್ಲದವರ ಹೆಸರನ್ನು ಮತದಾರ ಯಾದಿಯಲ್ಲಿ ಸೇರ್ಪಡೆಗೊಳಿಸಲಾಗಿದೆ. ಹೀಗೆ ಹೆಸರು ಸೇರ್ಪಡೆಗೊಂಡವರು ಮಡಿಕೈ ಪಂ. ಮತ್ತು ನೀಲೇಶ್ವರ ನಗರ ವ್ಯಾಪ್ತಿಯಲ್ಲಿ ವಾಸಿಸುವವರಾಗಿದ್ದಾರೆ. ಅದೇ ರೀತಿ ಒಂದೇ ಮನೆ ನಂಬ್ರದಲ್ಲಿ ಹಿಂದೂ, ಮುಸ್ಲಿಂ, ಕ್ರೈಸ್ತ ಧರ್ಮಕ್ಕೆ ಸೇರಿದವರ ಹೆಸರುಗಳು ಒಳಗೊಂಡಿವೆ. ನಷ್ಟ ಹೊಂದುವ ಸಾಧ್ಯತೆ ಇರುವ ಹಲವು ವಾರ್ಡ್ಗಳನ್ನು ತಮ್ಮ ಸ್ಥಳದಲ್ಲೇ ಉಳಿಸಿಕೊಳ್ಳಲು ಅಧಿಕಾರಿಗಳ ಸಹಾಯ ದೊಂದಿಗೆ ಆಡಳಿತ ಪಕ್ಷದವರು ಮತದಾರ ಯಾದಿಯಲ್ಲಿ ವ್ಯಾಪಕವಾಗಿ ಹೆಸರು ಸೇರ್ಪಡೆಗೊಳಿಸಿದ್ದಾರೆ ಎಂದು ಅಶ್ವಿನಿ ಆರೋಪಿಸಿದ್ದಾರೆ. ಇದೇ ರೀತಿ ಕುತ್ತಿಕ್ಕೋಲು ಪಂಚಾಯತ್ನ ಒಂದು ವಾರ್ಡ್ನಲ್ಲಿ ಓರ್ವ ವ್ಯಕ್ತಿ ಎರಡು ಓಟು ಹೊಂದಿದ್ದಾರೆ. ಇವರ ಹೆಸರು 6 ಮತ್ತು 10ನೇ ವಾರ್ಡ್ನಲ್ಲೂ ಒಳಗೊಂಡಿದೆ. ಇದೇ ರೀತಿ ವಿರೋಧ ಪಕ್ಷದವರ ಆಡಳಿತದಲ್ಲಿರುವ ಹಲವು ಪಂಚಾಯತ್ಗಳ ಮತದಾರ ಯಾದಿಗ ಳಲ್ಲೂ ಅಕ್ರಮವಾಗಿ ಹೆಸರು ಸೇರ್ಪಡೆಗೊಳಿಸಲಾಗಿದೆಯೆಂದು ಅವರು ಆರೋಪಿಸಿದ್ದಾರೆ.