ಕಾಸರಗೋಡು: ರಾಷ್ಟ್ರಪತಿಯವರ ಪೊಲೀಸ್ ಮೆಡಲ್‌ಗೆ ಕಾಸರಗೋಡು ಜಿಲ್ಲೆಯಿಂದ ಇಬ್ಬರು ಆಯ್ಕೆಗೊಂಡಿದ್ದಾರೆ. ಮಾಜಿ ಅಡಿಶನಲ್ ಎಸ್‌ಪಿ ಹಾಗೂ ಕಣ್ಣೂರು ರಾಜ್ಯ ಕ್ರೈಂ ಬ್ರಾಂಚ್ ಎಸ್ಪಿಯಾದ ಪಿ. ಬಾಲಕೃಷ್ಣನ್ ನಾಯರ್, ಕಲ್ಲಿಕೋಟೆ ರೂರಲ್ ಕ್ರೈಂಬ್ರಾಂಚ್ ಡಿವೈಎಸ್ಪಿ ಯು. ಪ್ರೇಮನ್ ಎಂಬವರು ಮೆಡಲ್‌ಗೆ ಅರ್ಹರಾಗಿದ್ದಾರೆ. ಬೇಕಲ ಪಾಲಕುನ್ನು ನಿವಾಸಿಯಾದ ಪಿ. ಬಾಲಕೃಷ್ಣನ್ ನಾಯರ್ ಇತ್ತೀಚೆಗೆ ಕಣ್ಣೂರು ಕ್ರೈಂ ಬ್ರಾಂಚ್ ಎಸ್ಪಿಯಾಗಿ ಅಧಿಕಾರ ವಹಿಸಿಕೊಂಡಿದ್ದರು. ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ಇನ್‌ಸ್ಪೆಕ್ಟರ್ ಆಗಿ ಸೇವೆ ಸಲ್ಲಿಸಿರುವ ಯು. ಪ್ರೇಮನ್ ಕಾಞಂಗಾಡ್ ಚೆಮ್ಮಟಂವಯಲ್ ನಿವಾಸಿಯಾಗಿದ್ದಾರೆ.
