ಕುಂಬಳೆ: ಕರ್ನಾಟಕ ನಿರ್ಮಿತ ವಿದೇಶ ಮದ್ಯ ಸಹಿತ ಓರ್ವನನ್ನು ಬಂಧಿಸಲಾಗಿದೆ. ಕುಬಣೂರು ನಿವಾಸಿ ರಮೇಶ್ (49) ಎಂಬಾತನನ್ನು ಕುಂಬಳೆ ಎಸ್‌ಐ ಶ್ರೀಜೇಶ್ ಕೆ ಬಂಧಿಸಿದ್ದಾರೆ. ಆರೋಪಿಯ ಕೈಯಿಂದ ಕರ್ನಾಟಕ ನಿರ್ಮಿತ 8 ಬಾಟ್ಲಿ ಹಾಗೂ 34 ಪ್ಯಾಕೆಟ್ ಮದ್ಯ ವಶಪಡಿಸಲಾಗಿದೆ. ಇವುಗಳನ್ನು ಚೀಲದಲ್ಲಿ ತುಂಬಿಸಿ ಆರೋಪಿ ಮಾರಾಟ ಕ್ಕಾಗಿ ಕೊಂಡೊಯ್ಯುತ್ತಿದ್ದ ವೇಳೆ ಕುಬ ಣೂರು ಶಾಂತಿಗುರಿಯಿಂದ ವಶಪಡಿಸಿ ರುವುದಾಗಿ ಪೊಲೀಸರು ತಿಳಿಸಿದ್ದಾರೆ.
