ಕಾಸರಗೋಡು: ನಗರದ ನುಳ್ಳಿಪ್ಪಾಡಿಯ ಮದ್ಯ ಬಾರ್ಬಳಿ ಯುವಕರ ಮಧ್ಯೆ ಘರ್ಷಣೆ ನಡೆದು ಅದರಲ್ಲಿ ಓರ್ವ ಇರಿತಕ್ಕೊಳಗಾಗಿದ್ದು ಇನ್ನೋರ್ವ ಗಾಯಗೊಂಡ ಘಟನೆ ಮೊನ್ನೆ ರಾತ್ರಿ ನಡೆದಿದೆ. ಈ ಘರ್ಷಣೆಯಲ್ಲಿ ತಿರುವನಂತಪುರ ಬಾಲರಾಮಪುರ ನಿವಾಸಿ ತೌಫೀಕ್ ಮತ್ತು ಕಾಸರಗೋಡು ನೆಲ್ಕಳ ಹೌಸ್ನ ರಿಜೇಶ್ ಕೆ.ಆರ್ ಎಂಬವರು ಗಾಯಗೊಂಡಿದ್ದಾರೆ. ಈ ಪೈಕಿ ತೌಫೀಕ್ನನ್ನು ಪರಿಯಾರಂ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಆತ ನೀಡಿದ ದೂರಿನಂತೆ ಕಾಸರಗೋಡು ಪೊಲೀಸರು ಕೊಲೆಯತ್ನ ಕೇಸು ದಾಖಲಿಸಿಕೊಂಡಿದ್ದಾರೆ. ಇದೇ ವೇಳೆ ರಿಜೇಶ್ ನೀಡಿದ ದೂರಿನಂತೆ ಕಂಡಲ್ಲಿ ಗುರುತುಹಚ್ಚಲು ಸಾಧ್ಯವಾಗುವ ಇಬ್ಬರ ವಿರುದ್ಧ ಕಾಸರಗೋಡು ಪೊಲೀಸರು ನರಹತ್ಯಾ ಯತ್ನ ಕೇಸು ದಾಖಲಿಸಿಕೊಂಡಿದ್ದಾರೆ.
