ಕಾಸರಗೋಡು: ಡಿವೈಎಫ್ಐ ನೇತಾರ ಮನೆಯೊಳಗೆ ನೇಣು ಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಬೇಡಗಂ ಪೋಳ ಎಂಬಲ್ಲಿನ ವಿನೀಶ್ (34) ಮೃತಪಟ್ಟ ವ್ಯಕ್ತಿ. ಇವರು ಬೀಂಬುಂಗಾಲ್ ವಲಯ ಅಧ್ಯಕ್ಷರೂ, ಕುಂಡಂಗುಳಿ ಫಾರ್ಮರ್ಸ್ ಬ್ಯಾಂಕ್ ನೌಕರನೂ ಆಗಿದ್ದರು. ಇಂದು ಬೆಳಿಗ್ಗೆ ಇವರು ಮನೆಯ ಬೆಡ್ರೂಂನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಕೂಡಲೇ ಬೇಡಡ್ಕದ ತಾಲೂಕು ಆಸ್ಪತ್ರೆಗೆ ತಲುಪಿಸಿದರೂ ಜೀವ ರಕ್ಷಿಸಲಾಗಲಿಲ್ಲ. ಬೇಡಗಂ ಪೊಲೀಸರು ಮೃತದೇಹದ ಮಹಜರು ನಡೆಸಿದರು.
ಮೃತರು ತಾಯಿ ನಿರ್ಮಲ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.