ಉಪ್ಪಳ: ವಿಶ್ವಹಿಂದೂ ಪರಿಷತ್ ಭಜರಂಗದಳ ಮಂಗಲ್ಪಾಡಿ ಖಂಡಸಮಿತಿ ವತಿಯಿಂದ ಅಖಂಡ ಭಾರತ ಸಂಕಲ್ಪ ದಿನದ ಪ್ರಯುಕ್ತ ಪಂಜಿನ ಮೆರವಣಿಗೆ ನಿನ್ನೆ ಸಂಜೆ ಜರಗಿತು. ಉಪ್ಪಳ ಶ್ರೀ ಅಯ್ಯಪ್ಪ ಭಜನಾ ಮಂದಿರ ಪರಿಸರದಿಂದ ಹೊರಟ ಮೆರವಣಿಗೆ ಪೇಟೆಯಲ್ಲಿ ಸಮಾಪ್ತಿಗೊಂಡಿತು. ವಿಶ್ವಹಿಂದೂ ಪರಿಷತ್ ಜಿಲ್ಲಾ ಕಾರ್ಯಾಧ್ಯಕ್ಷ ಡಾ. ಶಿವರಾಯ ಭಟ್ ಮುಳ್ಳೇರಿಯ ಮಾತನಾಡಿದರು. ಮುಖಂಡರಾದ ಹರಿನಾಥ ಭಂಡಾರಿ ಮುಳಿಂಜ, ಸಂಕಪ್ಪ ಭಂಡಾರಿ ಬಳ್ಳಂಬೆಟ್ಟು, ನಿರಂಜನ ಚೆರುಗೋಳಿ ಉಪಸ್ಥಿತರಿದ್ದರು. ಸತ್ಯ ವೀರನಗರ ಸ್ವಾಗತಿಸಿ, ರವಿ ಪರಂಕಿಲ ವಂದಿಸಿದರು.
