ಕಾಸರಗೋಡು: ಸ್ವಾತಂತ್ರ್ಯ ಚಳವಳಿ ಬಗ್ಗೆ ಚಾಡಿ ಹೇಳಿದವರಿಗೆ ಪ್ರಜಾಪ್ರಭುತ್ವದ ಬೆಲೆ ತಿಳಿಯದೆಂದು, ಬ್ರಿಟಿಷ್‌ನವರಿಗೆ ಕ್ಷಮೆ ಬರೆದು ಕೊಟ್ಟು ಜೈಲಿನಿಂದ ಬಿಡುಗಡೆಗೊಂಡವರು ಈಗ ಸಂವಿಧಾನವನ್ನು ಬುಡಮೇಲು ಗೊಳಿಸಲು ಯತ್ನಿಸುತ್ತಿರುವುದಾಗಿ ಇದರ ವಿರುದ್ಧ ದ್ವಿತೀಯ ಸ್ವಾತಂತ್ರ್ಯ ಹೋರಾಟಕ್ಕೆ ಚಾಲನೆ ನೀಡುವುದಾಗಿ ಕೆಪಿಸಿಸಿ ರಾಷ್ಟ್ರೀಯ ಕಾರ್ಯಸಮಿತಿ ಸದಸ್ಯ ಟಿ.ಎನ್. ಪ್ರತಾಪನ್ ನುಡಿದರು. ಆರ್‌ಎಸ್‌ಎಸ್, ನರೇಂದ್ರ ಮೋದಿ ಸಂಘ ಪರಿವಾರ ಸಂಸ್ಥೆಗಳು ಸೇರಿ ಮತ ಕಳವು ನಡೆಸಿರುವುದಾಗಿಯೂ, ಇವರನ್ನು ಆಡಳಿತದಿಂದ ಕೆಳಗಿಳಿಸುವವರೆಗೆ ಕಾಂಗ್ರೆಸ್ ಹೋರಾಟ ಮುಂದುವರಿಸಲಿದೆ ಎಂದು ಅವರು ನುಡಿದರು. ಬಿಜೆಪಿಯ ಪೋಷಕ ಸಂಘಟನೆಯಾಗಿ ಚುನಾವಣಾ ಆಯೋಗ ಬದಲಾಗಿರುವುದಾಗಿಯೂ ಅವರು ಆರೋಪಿಸಿದರು. ಮತ ಕಳವು ವಿಷಯದಲ್ಲಿ ರಾಹುಲ್ ಗಾಂಧಿಯ ನೇತೃತ್ವದಲ್ಲಿ ದೇಶವ್ಯಾಪಕವಾಗಿ ಹೋರಾಟ ಮುಂದುವರಿಯುತ್ತಿದ್ದು, ಈ ಹೋರಾಟಗಳಿಗೆ ಕೆಪಿಸಿಸಿ ಬೆಂಬಲ ನೀಡಿ ನಡೆಸುವ ಕಾರ್ಯಕ್ರಮದ ಪ್ರಕಾರ ಜಿಲ್ಲಾ ಸಮಿತಿ ನೇತೃತ್ವದಲ್ಲಿ ನಡೆದ ಫ್ರೀಡಂ ಲೈಟ್ ನೈಟ್ ಮಾರ್ಚ್ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಡಿಸಿಸಿ ಅಧ್ಯಕ್ಷ ಪಿ.ಕೆ. ಫೈಸಲ್ ಅಧ್ಯಕ್ಷತೆ ವಹಿಸಿದರು. ಮುಖಂಡರಾದ ಹಕೀಂ ಕುನ್ನಿಲ್, ಎ. ಗೋವಿಂದನ್ ನಾಯರ್, ಕೆ. ನೀಲಕಂಠನ್, ಎಂ. ಅಸೈನಾರ್, ಸಾಜಿದ್ ಮವ್ವಲ್, ಎಂ.ಸಿ. ಪ್ರಭಾಕರನ್, ಸೋಮಶೇಖರ ಶೇಣಿ ಸಹಿತ ಹಲವರು ಮಾತನಾಡಿದರು.