ಸ್ಥಳೀಯಾಡಳಿತ ಸಂಸ್ಥೆಗಳ ಚುನಾವಣೆ: ಆಗಸ್ಟ್ 30ರಂದು ಮತದಾರ ಯಾದಿ ಪ್ರಕಟ

ತಿರುವನಂತಪುರ: ಸ್ಥಳೀಯಾಡಳಿತ ಸಂಸ್ಥೆಗಳಿಗೆ ಡಿಸೆಂಬರ್‌ನಲ್ಲಿ ಚುನಾವಣೆ ನಡೆಯಲಿರುವಂತೆಯೇ ಅದರ ಮತದಾರ ಯಾದಿಯನ್ನು ಆಗಸ್ಟ್ 30ರಂದು ರಾಜ್ಯ ಚುನಾವಣಾ ಆಯೋಗ ಪ್ರಕಟಿಸಲಿದೆ. ಆ ಬಳಿಕ ಸ್ಥಳೀಯಾಡಳಿತ ಸಂಸ್ಥೆಗಳಿಗಿರುವ ಅಗತ್ಯದ ಎಲ್ಲಾ ಸಜ್ಜೀಕರಣಗಳನ್ನೂ ಆರಂಭಿಸಲಿದೆ.

ಮತದಾರಯಾದಿ ಪ್ರಕಟಗೊಂಡ ಬಳಿಕ ಮತಗಟ್ಟೆಗಳ ಕ್ರಮೀಕರಣೆ, ಮೀಸಲಾತಿ ವಾರ್ಡ್‌ಗಳು ಇತ್ಯಾದಿ ಪ್ರಕ್ರಿಯೆಗಳು ಆರಂಭಗೊಳ್ಳಲಿದೆ. ಮತದಾರ ಯಾದಿಯಲ್ಲಿ ಹೆಸರು ಸೇರ್ಪಡೆ ಇತ್ಯಾದಿಗಳು ಸೇರಿದಂತೆ ಒಟ್ಟು ೩೫.೦೮ ಲಕ್ಷ ಅರ್ಜಿಗಳು ರಾಜ್ಯ ಚುನಾವಣಾ ಆಯೋಗಕ್ಕೆ ಲಭಿಸಿದೆ. ಅದು ಈಗ ಆಯೋಗದ ಪರಿಶೀಲನೆಯಲ್ಲಿದೆ. ಇದರಲ್ಲಿ ಐದು ಲಕ್ಷದಷ್ಟು ಮಂದಿಯನ್ನು ಮತದಾರ ಯಾದಿಯಲ್ಲಿ ಈಗಾಗಲೇ ಹೊಸದಾಗಿ ಸೇರ್ಪಡೆಗೊಳಿಸಲಾಗಿದೆ. ಉಳಿದ ಅರ್ಜಿಗಳು ಈಗ ಪರಿಶೀಲನೆಯಲ್ಲಿದೆ. ಇವುಗಳನ್ನೆಲ್ಲಾ ಪರಿಶೀಲನೆ ಪೂರ್ಣಗೊಂಡ ಬಳಿಕವಷ್ಟೇ ಮತದಾರ ಯಾದಿ ಪ್ರಕಟಿಸಲಾಗುವುದು. ಇದು ಪ್ರಕಟಗೊಂಡ ಬಳಿಕವೂ ಮತದಾರ ಯಾದಿಯಿಂದ ಹೆಸರು ಹೊರತುಪಡಿಸುವಿಕೆ ಇತ್ಯಾದಿ ಅರ್ಜಿಗಳು ಸಲ್ಲಿಸಲ್ಪಟ್ಟಲ್ಲಿ ಅದನ್ನೂ ಆಯೋಗ ಪರಿಶೀಲಿಸಲಿದೆ ಮಾತ್ರವಲ್ಲ ಮತದಾರ ಯಾದಿಯಲ್ಲಿ ಹೆಸರು ಸೇರ್ಪಡೆ ಮತ್ತೆ ಅವಕಾಶವನ್ನು ನೀಡಲಿದೆ.

You cannot copy contents of this page