ಮಲಯಾಳಂ ಚಲನಚಿತ್ರ ಕಲಾವಿದರ ಸಂಘದ ಮೊದಲ ಮಹಿಳಾ ಅಧ್ಯಕ್ಷೆಯಾಗಿ ಶ್ವೇತಾ ಮೆನನ್ ಆಯ್ಕೆ

ಕೊಚ್ಚಿ: ಮಲಯಾಳಂ ಚಲನಚಿತ್ರ ಕಲಾವಿದರ ಸಂಘಟನೆಯಾದ ಅಮ್ಮ ಇದರ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಮಹಿಳೆಯರು ಅದರ ಉನ್ನತ ನಾಯಕತ್ವ ಸ್ಥಾನಗಳಿಗೆ ಆಯ್ಕೆಯಾಗಿದ್ದಾರೆ.

ಅಮ್ಮದ ನೂತನ ಪದಾಧಿಕಾರಿಗಳ ಆಯ್ಕೆಗಾಗಿ ನಡೆದ ಜಿದ್ದಾಜಿದ್ದಿನ ಚುನಾವಣೆಯಲ್ಲಿ ನಟಿ ಶ್ವೇತಾ ಮೆನನ್ ಅಧ್ಯಕ್ಷರಾಗಿ  ಮತ್ತು ಕುಕು ಪರಮೇಶ್ವರನ್ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಗೊಂಡಿದ್ದಾರೆ. ಇದರ ಹೊರತಾಗಿ   ಅನ್ಸಿಬಾ ಹಸನ್ ಜತೆ ಕಾರ್ಯದರ್ಶಿ ಮತ್ತು ಲಕ್ಷ್ಮೀಪ್ರಿಯಾ ಮತ್ತು ಜಯನ್ ಚೇರ್ತಲ ಆಯ್ಕೆಗೊಂಡಿದ್ದಾರೆ.  ಕೋಶಾಧಿಕಾರಿಯಾಗಿ ಉಣ್ಣಿ ಶಿವಪಾಲನ್ ಆರಿಸಲ್ಪಟ್ಟಿದ್ದಾರೆ. ಅಧ್ಯಕ್ಷ ಸ್ಥಾನಕ್ಕೆ ಶ್ವೇತಾ ಮೆನನ್ ವಿರುದ್ಧ ನಟಿ ದೇವನಾ ಸ್ಪರ್ಧಿಸಿದ್ದರು.

You cannot copy contents of this page