ಕಾಸರಗೋಡು: ಆಟೋ ರಿಕ್ಷಾ ತಡೆದು ನಿಲ್ಲಿಸಿ ಚಾಲಕನ ತಲೆಗೆ ಕಲ್ಲಿ ನಿಂದ ಹೊಡೆದು ಕೊಲೆಗೈಯ್ಯಲೆತ್ನಿಸಿದ ಘಟನೆ ನಡೆದಿದೆ. ಆಟೋ ಚಾಲಕ ಪರಪ್ಪ ಕೂರಾಂಕುಂಡ್ ನಿವಾಸಿ ಮಧು (48) ಎಂಬವರ ಮೇಲೆ ಹಲ್ಲೆ ನಡೆಸಿದ್ದು ಈ ಸಂಬಂಧ ಚೆಂಬಂಚೇರಿ ನಿವಾಸಿ ಸುನಿಲ್ (39) ಎಂಬಾ ತನನ್ನು ವೆಳ್ಳರಿಕುಂಡ್ ಪೊಲೀಸರು ಬಂಧಿಸಿದ್ದಾರೆ. ನಿನ್ನೆ ರಾತ್ರಿ 11 ಗಂಟೆಗೆ ಬಳಾಲ್ ಚೆಂಬಂ ಚೇರಿ ಎಂಬಲ್ಲಿ ರಸ್ತೆಗೆ ಕಲ್ಲುಗಳನ್ನಿರಿಸಿ ಆಟೋ ರಿಕ್ಷಾ ತಡೆದಿ ರುವುದಾಗಿಯೂ, ಬಳಿಕ ಕಲ್ಲಿನಿಂದ ಮಧುವಿನ ತಲೆಗೆ ಹಲ್ಲೆಗೈದಿರುವುದಾಗಿ ದೂರಲಾಗಿದೆ. ಪೂರ್ವದ್ವೇಷವೇ ಹಲ್ಲೆಗೆ ಕಾರಣವೆನ್ನಲಾಗಿದೆ. ಘಟನೆಗೆ ಸಂಬಂಧಿಸಿ ನರಹತ್ಯಾಯತ್ನ ಕೇಸು ದಾಖಲಿಸಲಾಗಿದೆ.
