ಹೊಸಂಗಡಿ ಬಳಿ ಅಂಗಡಿಗಳ ಮುಂದೆ ರಕ್ತ ಹೆಪ್ಪುಗಟ್ಟಿದ ಸ್ಥಿತಿಯಲ್ಲಿ ಪತ್ತೆ: ತನಿಖೆ ಆರಂಭ

ಉಪ್ಪಳ: ಹೊಸಂಗಡಿ ಬಳಿಯ ಅಂಗಡಿಪದವು ದುರ್ಗಿಪಳ್ಳ ಪರಿಸರದಲ್ಲಿ ಎರಡು ಅಂಗಡಿಗಳ ಮುಂದೆ ರಕ್ತ ಹೆಪ್ಪುಗಟ್ಟಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಇಂದು ಬೆಳಿಗ್ಗೆ ಅಂಗಡಿಗಳನ್ನು ತೆರೆಯಲು ವ್ಯಾಪಾರಿಗಳು ತಲುಪಿದಾಗ ರಕ್ತ ಕಂಡುಬಂದಿದೆ. ಭಾರೀ ಪ್ರಮಾಣದಲ್ಲಿ ರಕ್ತ ಚೆಲ್ಲಿರಬಹುದೆಂದು ಅಂದಾಜಿ ಸಲಾಗಿದೆ. ಈ ಬಗ್ಗೆ ವ್ಯಾಪಾರಿಗಳು ನೀಡಿದ ಮಾಹಿತಿಯಂತೆ ಮಂಜೇಶ್ವರ ಪೊಲೀಸರು ಸ್ಥಳಕ್ಕೆ ತಲುಪಿ ತನಿಖೆ ಆರಂಭಿಸಿದ್ದಾರೆ. ನಿನ್ನೆ ರಾತ್ರಿ ಇಲ್ಲಿ ರಕ್ತ ಚೆಲ್ಲಿರಬಹುದೆಂದು ಅಂದಾಜಿಸಲಾಗಿದೆ. ಇದು ಮನುಷ್ಯನದ್ದೇ ಅಥವಾ ಯಾವುದಾದರೂ ಪ್ರಾಣಿಯದ್ದಾಗಿರಬಹುದೇ ಎಂದು ಖಚಿತಪಡಿಸಲಾಗಿಲ್ಲ. ಎರಡು ಅಂಗಡಿಗಳ ಮುಂದೆ ರಕ್ತ ಪತ್ತೆಯಾಗಿರುವುದು ನಿಗೂಢತೆಗೆ ಕಾರಣವಾಗಿದೆ. ಸಮಗ್ರತನಿಖೆಯಲ್ಲಿ ಈ ಬಗ್ಗೆ ತಿಳಿಯಬಹುದಾಗಿದೆಯೆಂದು ಪೊಲೀಸರು ತಿಳಿಸಿದ್ದಾರೆ.

You cannot copy contents of this page