ಮಂಜೇಶ್ವರ: ಮಂಗಳೂರು ಭಾಗ ದಿಂದ ಕಾಸರಗೋಡಿಗೆ ಅನಧಿಕೃತವಾಗಿ ಚಿನ್ನ ಸಾಗಾಟ ಮತ್ತೆ ತೀವ್ರಗೊಂಡಿದೆ. ಮಂಜೇಶ್ವರ ಅಬ ಕಾರಿ ಚೆಕ್ ಪೋಸ್ಟ್‌ನ ಅಧಿಕಾರಿಗಳು ನಿನ್ನೆ ಹಾಗೂ ಮೊನ್ನೆ ನಡೆಸಿದ ಕಾರ್ಯಾಚರಣೆಯಲ್ಲಿ ಒಟ್ಟು 152 ಪವನ್ ಚಿನ್ನವನ್ನು ವಶಪಡಿಸ ಲಾಗಿದೆ. ಈ ಸಂಬಂಧ ಇಬ್ಬರನ್ನು ಬಂಧಿಸಲಾಗಿದೆ.
ನಿನ್ನೆ ಸಂಜೆ ಮಂಗಳೂರಿನಿಂದ ಕಾಸರಗೋಡಿಗೆ ಆಗಮಿಸುತ್ತಿದ್ದ ಕರ್ನಾಟಕ ರಾಜ್ಯ ಸಾರಿಗೆ ಬಸ್‌ನಲ್ಲಿ ದಾಖಲೆಗಳಿಲ್ಲದೆ ಸಾಗಿಸುತ್ತಿದ್ದ 96 ಪವನ್ (762 ಗ್ರಾಂ) ಚಿನ್ನಾಭರಣ ಗಳನ್ನು ವಶಪಡಿಸಲಾಗಿದೆ. ಚಿನ್ನ ಸಾಗಿಸುತ್ತಿದ್ದ ಮುಂಬೈ ಸಿಟಿಯ ತವಕ್ಕಲ್ ಬಿಲ್ಡಿಂಗ್‌ನಲ್ಲಿ ವಾಸಿಸುವ ಮುಜಾಫರ್ ಹುಸೈನ್ ಎಂಬಾತನನ್ನು ಬಂಧಿಸಲಾ ಗಿದೆ. ಮೊನ್ನೆಯೂ ಇದೇ ಚೆಕ್‌ಪೋ ಸ್ಟ್‌ನಲ್ಲಿ ಅಧಿಕಾರಿಗಳು ೫೫ ಪವನ್ ಚಿನ್ನಾಭರಣ ಹಾಗೂ 4 ಲಕ್ಷ ರೂ. ಕಾಳಧನ ವಶಪಡಿಸಿದ್ದರು. ಕಾಸರಗೋ ಡಿಗೆ ಬರುತ್ತಿದ್ದ ಕರ್ನಾಟಕ ರಾಜ್ಯ ಸಾರಿಗೆ ಬಸ್‌ನಲ್ಲಿ ದಾಖಲೆಗಳಿಲ್ಲದೆ ಸಾಗಿಸುತ್ತಿದ್ದ ಚಿನಾಭರಣ ವಶಪಡಿಸಲಾಗಿದೆ. ಈ ಸಂಬಂಧ ಕಲ್ಲಿಕೋಟೆ ಕಕ್ಕೋಡಿ ನಿವಾಸಿ ಮೇಲೇಡತ್ತ್ ವೀಟಿಲ್ ಮುಹಮ್ಮದ್ ಫಾಸಿಲ್ ಎಂಬಾತನನ್ನು ಬಂಧಿಸಲಾ ಗಿದೆ. ಅಬಕಾರಿ ಸರ್ಕಲ್ ಇನ್‌ಸ್ಪೆಕ್ಟರ್ ಶಿಜಿತ್ ಕುಮಾರ್ ಕೆ.ಕೆ, ಇನ್‌ಸ್ಪೆಕ್ಟರ್ ಜಿನು ಜೇಮ್ಸ್, ಪ್ರಿವೆಂಟೀವ್ ಆಫೀಸರ್ ಮೊಯ್ದೀನ್ ಸಾದಿಕ್, ಗ್ರೇಡ್ ಪ್ರಿವೆಂಟೀವ್ ಆಫೀಸರ್ ವಿಜಯನ್ ಸಿ, ಸಿವಿಲ್ ಎಕ್ಸೈಸ್ ಆಫೀಸರ್ ರಾಹುಲ್ ಟಿ, ಮೆಮು ಯೂನಿರ್ಟ ಪ್ರಿವೆಂಟೀವ್ ಆಫೀಸರ್ ಮಂಜುನಾಥ ಆಳ್ವ, ಸಿವಿಲ್ ಎಕ್ಸೈಸ್ ಆಫೀಸರ್‌ಗಳಾದ ಸುಬಿನ್ ಫಿಲಿಪ್, ಅಬ್ದುಲ್ ಅಸೀಸ್ ಎಂಬಿವರು ನಡೆಸಿದ ಕಾರ್ಯಾ ಚರಣೆಯಲ್ಲಿ ಚಿನ್ನಾಭರಣ ವಶಪಡಿಸಲಾಗಿದೆ. ಬಂಧಿತರನ್ನು ಹಾಗೂ ಚಿನ್ನಾಭರಣಗಳನ್ನು ಮುಂದಿನ ಕ್ರಮಗಳ ಅಂಗವಾಗಿ ಜಿಎಸ್‌ಟಿ ಇಲಾಖೆಗೆ ಹಸ್ತಾಂತರಿಸಲಾಯಿತು.