ಕಾಸರಗೋಡು: ಯುವತಿಗೆ ಕಿರುಕುಳ ನೀಡಿದ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಆರೋಪಿ ಯನ್ನು ಪತ್ತೆಹಚ್ಚಲು ಪೊಲೀಸರು ತನಿಖೆ ತೀವ್ರಗೊಳಿಸಿದ್ದಾರೆ. ಬಂದಡ್ಕ ಏಣಿಯಾಡಿಯ ಆದಂ ಎಂಬಾತನನ್ನು ಪತ್ತೆಹಚ್ಚಲು ಬೇಡಗಂ ಪೊಲೀಸರು ಕ್ರಮ ಕೈಗೊಂಡಿದ್ದಾರೆ. ಈತ ಬಂದಡ್ಕ ದಲ್ಲಿ ವ್ಯಾಪಾರಿಯಾಗಿದ್ದಾನೆಂದು ಹೇಳಲಾಗುತ್ತಿದೆ. ಅಗೋಸ್ತ್ 15, 16ರಂದು ಪ್ರಕರಣಕ್ಕೆ ಕಾರಣವಾದ ಘಟನೆ ನಡೆದಿದೆ. ಆರೋಪಿಯನ್ನು ಪತ್ತೆಹಚ್ಚಲು ಪೊಲೀಸರು ಸೈಬರ್ ಸೆಲ್ನ ಸಹಾಯ ಯಾಚಿಸಿದ್ದಾರೆ.
