ಕಾಸರಗೋಡು: 13ರ ಹರೆಯದ ವಿದ್ಯಾರ್ಥಿನಿಯನ್ನು ಕರೆದೊಯ್ದು ಲೈಂಗಿಕ ಕಿರುಕುಳ ನೀಡಿದ ಪೋಕ್ಸೋ ಪ್ರಕರಣದ ಆರೋಪಿಯನ್ನು ಕಾಸರಗೋಡು ಮಹಿಳಾ ಪೊಲೀಸ್ ಠಾಣೆಯ ಠಾಣಾಧಿಕಾರಿಯಾದ ಎಸ್‌ಐ ಅಜಿತಾ ಕೆ. ಬಂಧಿಸಿದ್ದಾರೆ. ಮೂಲತಃ ಕಾಸರಗೋಡು ಚೇರಂಗೈ ಕಡಪ್ಪುರ ನಿವಾಸಿ ಹಾಗೂ ಈಗ ಅಡ್ಕತ್ತಬೈಲು ಅರ್ಜಾಲ್ ರಸ್ತೆ ಬಳಿ ವಾಸಿಸುತ್ತಿರುವ ಅಬ್ದುಲ್ ಮುನೀರ್ (31) ಬಂಧಿತ ಆರೋಪಿ. 13ರ ಹರೆಯದ ವಿದ್ಯಾರ್ಥಿನಿಯನ್ನು ಪ್ರೀತಿಸಿ ಆಕೆಯನ್ನು ಬೈಕ್‌ನಲ್ಲಿ ಬೇಕಲ ಪೋರ್ಟ್‌ಗೆ ಕರೆದೊಯ್ದು ಲೈಂಗಿಕ ಕಿರುಕುಳ ನೀಡಿರುವುದಾಗಿ ಆರೋಪಿಸಿ ನೀಡಲಾದ ದೂರಿನಂತೆ ಕಾಸರಗೋಡು ಮಹಿಳಾ ಪೊಲೀಸ್ ಠಾಣೆಯಲ್ಲಿ ಆರೋಪಿ ವಿರುದ್ಧ ಪೋಕ್ಸೋ ಕಾನೂನು ಪ್ರಕಾರ ಕೇಸು ದಾಖಲಿಸಲಾಗಿತ್ತು. ಅದಕ್ಕೆ ಸಂಬಂಧಿಸಿ ಆತನನ್ನು ಬಂಧಿಸಲಾಗಿದೆ.
