ಬದಿಯಡ್ಕ: ಪೆರಡಾಲ ಶ್ರೀ ಉದನೇಶ್ವರ ದೇವಸ್ಥಾನದಲ್ಲಿ ಶ್ರೀಶಕ್ತಿ ಪಂಚಾಕ್ಷರಿ ಹೋಮ ಸಮಾಪ್ತಿಗೊಂಡಿತು.
ಹಲವಾರು ಮಂದಿ ಭಕ್ತರು ಭಾಗವಹಿಸಿದ್ದರು. ಇದೇ ವೇಳೆ ಗರ್ಭಗುಡಿಯ ನವೀಕರಣಕ್ಕೆ ದೇವರ ಬಾಲಾಲಯ ಪ್ರತಿಷ್ಠೆ ಕೈಗೊಳ್ಳಲಾಯಿತು. ಬ್ರಹ್ಮಶ್ರೀ ಕುಂಟಾರು ರವೀಶ ತಂತ್ರಿ ಪೌರೋಹಿತ್ಯ ವಹಿಸಿದರು. ಶಿಲ್ಪಿ ಕೃಷ್ಣ ಪ್ರಸಾದ ಮುನಿಯಂಗಳ, ವಸಂತ ಪೈ ಬದಿಯಡ್ಕ, ಆಡಳಿತ ಮೊಕ್ತೇಸರ ವೆಂಕಟ್ರಮಣ ಭಟ್ ಚಂಬಲ್ತಿಮಾರ್, ಜೀರ್ಣೋದ್ಧಾರ ಸಮಿತಿ ಕಾರ್ಯದರ್ಶಿ ನಿರಂಜನ ರೈ, ಕೋಶಾಧಿಕಾರಿ ಸೂರ್ಯನಾರಾಯಣ, ವಿವಿಧ ಸಮಿತಿ ಪದಾಧಿಕಾರಿಗಳು ಭಾಗವಹಿಸಿದರು.