ಮೊಗ್ರಾಲ್ ಪುತ್ತೂರು: ಪಂಚಾಯತ್ ವ್ಯಾಪ್ತಿಯ ಸಿಪಿಸಿಆರ್‌ಐ ಪ್ರಧಾನ ಕವಾಟದಿಂದ ಚಂದ್ರಗಿರಿ ರೆಸ್ಟ್ ಹೌಸ್‌ವರೆಗಿರುವ ಸ್ಥಳಗಳಲ್ಲಿ ಹೆದ್ದಾರಿ ಅಭಿವೃದ್ಧಿಯ ಬಳಿಕ ಬೀದಿ ದೀಪಗಳನ್ನು ಸ್ಥಾಪಿಸದಿರುವುದು ಸಮಸ್ಯೆಗೀಡಾಗಿದ್ದು, ಇಲ್ಲಿ ಕೂಡಲೇ ಬೀದಿ ದೀಪ ಸ್ಥಾಪಿಸಲು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಸಿಪಿಎಂ ಮೊಗ್ರಾಲ್ ಪುತ್ತೂರು ಲೋಕಲ್ ಸಮಿತಿ ಪ್ರೊಜೆಕ್ಟ್ ಡೈರೆಕ್ಟರ್‌ಗೆ ಮನವಿ ನೀಡಿದೆ. ಸುಮಾರು ಒಂದೂವರೆ ಕಿಲೋ ಮೀಟರ್‌ನಷ್ಟು ಸ್ಥಳದಲ್ಲಿ ಬೀದಿ ದೀಪಗಳನ್ನು ಸ್ಥಾಪಿಸಲಾಗಿಲ್ಲ. ಈ ಪ್ರದೇಶದಲ್ಲಿ ಪಂಚಾಯತ್ ಕಚೇರಿ, ಇತರ ಕಚೇರಿಗಳು, ಪೇಟೆ ಒಳಗೊಂಡಿದ್ದು, ದಿನನಿತ್ಯ ತಲುಪುವ ಮಂದಿಗೆ ರಾತ್ರಿ ಸಮಯದಲ್ಲಿ ಬೀದಿ ದೀಪಗಳಿಲ್ಲದೆ ಸಮಸ್ಯೆಯಾಗುತ್ತಿದೆ ಎಂದು ಮನವಿಯಲ್ಲಿ ಸೂಚಿಸಲಾಗಿದೆ. ಮನವಿಯ ಪ್ರತಿಯನ್ನು ಕೇರಳ ಲೋಕೋಪಯೋಗಿ ಇಲಾಖೆ ಸಚಿವರಿಗೂ ನೀಡಲಾಗಿದೆ ಎಂದು ಸಿಪಿಎಂ ಪ್ರಕಟಣೆಯಲ್ಲಿ ತಿಳಿಸಿದೆ.
