ಚೆಂಗಳ ಪಂ. ಕೃಷಿಕರ ದಿನಾಚರಣೆ ಪ್ರಹಸನ- ಬಿಜೆಪಿ ಆರೋಪ

ಚೆರ್ಕಳ: ಚೆಂಗಳ ಪಂಚಾಯತ್‌ನ ಕೃಷಿಕರ ದಿನಾಚರಣೆ ಆಡಳಿತ ಪಕ್ಷದ ಕಾರ್ಯಕ್ರಮವಾಗಿ ಬದಲಾಗಿದೆ ಎಂದು ಪಂಚಾಯತ್ ಬಿಜೆಪಿ ಅಧ್ಯಕ್ಷ ಪ್ರಭಾಕರ ಎಡನೀರು ಆರೋಪಿಸಿದ್ದಾರೆ. ಕೃಷಿಕರ ದಿನಾಚರಣೆ ಪಂಚಾಯತ್ ನೇತೃತ್ವದಲ್ಲಿ ನಡೆಯಬೇಕಾಗಿದ್ದು, ಆ ಕಾರ್ಯಕ್ರಮಕ್ಕೆ ಎಲ್ಲಾ ಪಕ್ಷದವರನ್ನು ಆಹ್ವಾನಿಸಬೇಕಾಗಿತ್ತು. ಆದರೆ ಬಿಜೆಪಿ ಪ್ರತಿನಿಧಿಗಳಿಗೆ ಯಾವುದೇ ಆಹ್ವಾನ ನೀಡಿಲ್ಲ. ಪಂಚಾಯತ್‌ನ ಆಡಳಿತ ಮಂಡಳಿಯ ಈ ಕ್ರಮ ಖಂಡನೀಯವಾಗಿದೆ ಎಂದು ಪ್ರಭಾಕರ ಅಭಿಪ್ರಾಯಪಟ್ಟಿದ್ದಾರೆ. ಸಾರ್ವಜನಿಕ ಕಾರ್ಯಕ್ರಮವನ್ನು ಸ್ವಂತ ಪಕ್ಷದ್ದೆಂಬ ರೀತಿಯಲ್ಲಿ ನಡೆಸುವ ಮುಸ್ಲೀಂಲೀಗ್ ಆಡಳಿತ ಸಮಿತಿಯ ನಿಲುವು ಅಪಹಾಸ್ಯಕರವಾಗಿದೆ. ಇಂತಹ ನೀತಿಯನ್ನು ಆಡಳಿತ ಪಕ್ಷ ಕೊನೆಗೊಳಿಸಬೇಕು. ಇಲ್ಲದಿದ್ದಲ್ಲಿ ಇದರ ವಿರುದ್ಧ ಬಿಜೆಪಿ ತೀವ್ರ ಚಳವಳಿ ನಡೆಸಲು ಹಿಂಜರಿಯದೆಂದೂ ಪ್ರಭಾಕರ ಎಡನೀರು ತಿಳಿಸಿದ್ದಾರೆ.

RELATED NEWS

You cannot copy contents of this page