ಉಪ್ಪಳ: ಕೊಂಡೆವೂರು ಮಠ ಬಳಿಯ ನಿವಾಸಿ ಕೇಶವ (70) ಸ್ವಗೃಹದಲ್ಲಿ ನಿಧನರಾದರು. ಇವರು ಹಲವು ವರ್ಷಗಳ ಕಾಲ ಮಂಗಲ್ಪಾಡಿ ಪಂಚಾಯತ್ ಕಚೇರಿ ಕಟ್ಟಡದಲ್ಲಿ ಹೋಟೆಲ್ ವ್ಯಾಪಾರಿಯಾಗಿದ್ದರು. ಕೊಂಡೆವೂರು ಶ್ರೀ ನಿತ್ಯಾನಂದ ಮಠದಲ್ಲಿ ಸಕ್ರಿಯರಾಗಿದ್ದರು. ಮೃತರು ಪತ್ನಿ ಶಾಂತ, ಮಕ್ಕಳಾದ ಪ್ರಶಾಂತ್, ಪ್ರಜಿತ, ಪವಿತ, ಸೊಸೆ ಮಮತಾ, ಅಳಿಯಂದಿರಾದ ಸುನಿಲ್ ಕಾಸರಗೋಡು, ಪ್ರಸನ್ನ ಕಾಞಂಗಾಡ್, ಸಹೋದರ ಭಾಸ್ಕರ ಪುಳಿಕುತ್ತಿ, ಸಹೋದರಿಯರಾದ ಸಾವಿತ್ರಿ, ನಳಿನಿ, ಶಾಂಭವಿ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಓರ್ವ ಸಹೋದರ ನಾರಾಯಣ, ಸಹೋದರಿ ಲಕ್ಷಿ÷್ಮÃ ಈ ಹಿಂದೆ ನಿಧನ ಹೊಂದಿದ್ದಾರೆ.
