ಬದಿಯಡ್ಕ: ಬಾಂಜತ್ತಡ್ಕ ಉದಯಗಿರಿ ಭಗತ್ ಸಿಂಗ್ ಆರ್ಟ್ಸ್ ಆಂಡ್ ಸ್ಪೋರ್ಟ್ಸ್ ಕ್ಲಬ್ ವಾರ್ಷಿಕೋತ್ಸವ ಹಾಗೂ ಶ್ರೀ ಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮ ಉದಯಗಿರಿ ಶಾಲಾ ವಠಾರದಲ್ಲಿ ಜರಗಿತು. ಮುಖ್ಯೋಪಾಧ್ಯಾಯ ಶ್ರೀಧರ ಭಟ್ ಬಿ. ಉದ್ಘಾಟಿಸಿದರು. ವಿವಿಧ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಯಿತು. ಸಮಾರೋಪ ಸಮಾರಂಭದಲ್ಲಿ ಯಕ್ಷಗಾನ ಕಲಾವಿದ ನಾರಾಯಣ ಮೂಲಡ್ಕ ಅಧ್ಯಕ್ಷತೆ ವಹಿಸಿದರು. ಪಂಚಾಯತ್ ಸದಸ್ಯ ಈಶ್ವರ, ಸಿಪಿಐ ಬದಿಯಡ್ಕ ಮಂಡಲ ಕಾರ್ಯದರ್ಶಿ ಕೆ. ಚಂದ್ರಶೇಖರ ಶೆಟ್ಟಿ, ಬಿಜೆಪಿಯ ಹರಿಪ್ರಸಾದ್ ಯಾದವ್ ಪುತ್ತೂರು, ಸಿಪಿಎಂ ಬದಿಯಡ್ಕ ಲೋಕಲ್ ಕಾರ್ಯದರ್ಶಿ ಶ್ರೀಕಾಂತ್, ಅಧ್ಯಾಪಕ ನವೀನ್ ಕುಮಾರ್ ಪಿ. ಅತಿಥಿಗಳಾಗಿ ಭಾಗವಹಿಸಿದರು. ಇಕ್ಕೇರಿ ಶ್ರೀ ಶಂಕರನಾರಾಯಣ ದೇವಸ್ಥಾನದ ಪ್ರಧಾನ ಅರ್ಚಕ ನಾರಾಯಣ ಭಟ್ರನ್ನು ಗೌರವಿಸಲಾಯಿತು. ಉಪ್ಲೇರಿ ಮಂತ್ರಮೂರ್ತಿ ಗುಳಿಗ ಸನ್ನಿಧಿಯ ಗೋಪಾಲಕೃಷ್ಣ ವಾಂತಿಚ್ಚಾಲು ಮಾತನಾಡಿದರು. ಪಿಟಿಎ ಅಧ್ಯಕ್ಷ ಸುಕುಮಾರ ಬಿ. ಶುಭ ಕೋರಿದರು. ಡಾ| ಶ್ರೀನಿಧಿ ಸರಳಾಯ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಿಸಿದರು. ಕ್ಲಬ್ನ ಅಧ್ಯಕ್ಷ ಕೃಷ್ಣ ಕುಮಾರ್ ಸ್ವಾಗತಿಸಿ, ಕಾರ್ಯದರ್ಶಿ ವಸಂತ ಕುಮಾರ್ ವಂದಿಸಿದರು. ಶಾಲಾ ಮಕ್ಕಳು ಪ್ರಾರ್ಥನೆ ಹಾಡಿದರು.
