ಕುಂಬಳೆ: ಮಂಜೇಶ್ವರ ಶಾಸಕರ ನಿಧಿಯಿಂದ ವೆಚ್ಚ ಮಾಡಿ ನಿರ್ಮಿಸಿದ ಕಂಚಿಕಟ್ಟೆ ಮಳಿ- ಅರಮನೆ ರಸ್ತೆಯನ್ನು ಕಾಂಕ್ರಿಟೀಕ ರಣಗೊಳಿಸಿದ್ದು, ಇದರ ಉದ್ಘಾಟನೆ ಯನ್ನು ಶಾಸಕ ಎಕೆಎಂ ಅಶ್ರಫ್ ನಿರ್ವಹಿಸಿದರು. ಪಂಚಾಯತ್ ಅಧ್ಯಕ್ಷೆ ತಾಹಿರಾ ಯೂಸಫ್ ಅಧ್ಯಕ್ಷತೆ ವಹಿಸಿದರು. ಉಪಾಧ್ಯಕ್ಷ ನಾಸರ್ ಮೊಗ್ರಾಲ್, ಸ್ಥಾಯಿ ಸಮಿತಿ ಅಧ್ಯಕ್ಷರಾದ ರಹ್ಮಾನ್, ಸಬೂರ, ಸದಸ್ಯೆ ಪ್ರೇಮಾವತಿ, ಮಂಜುನಾಥ ಆಳ್ವ, ರಾಮಚಂದ್ರ ಗಟ್ಟಿ, ಕುಂಬಳೆ ಲಕ್ಷ್ಮಣ ಪ್ರಭು, ಸುಂದರ ಆರಿಕ್ಕಾಡಿ, ರವಿ ಪೂಜಾರಿ, ಪೃಥ್ವಿರಾಜ್ ಶೆಟ್ಟಿ, ಡಾಲ್ಫಿ ಡಿಸೋಜಾ, ಥೋಮಸ್ ರೋಡ್ರಿಗಸ್, ಚಿರಂಜೀವಿ ಕ್ಲಬ್ನ ಅಧ್ಯಕ್ಷ ಕೃಷ್ಣ ಗಟ್ಟಿ, ಸದಸ್ಯರು, ಸತೀಶ್ ಪೂಜಾರಿ, ವಿಶ್ವನಾಥ ಶೆಟ್ಟಿ, ಗುರುವಪ್ಪ, ಫಾರೂಕ್, ಸ್ಥಳೀಯರು ಭಾಗವಹಿಸಿದರು. ನಾರಾಯಣ ಪೂಜಾರಿ ಸ್ವಾಗತಿಸಿ, ಮುನೀರ್ ಮಳಿ ವಂದಿಸಿದರು.
