ಕಾಸರಗೋಡು: ಜಿಲ್ಲಾ ಟೂರಿಸಂ ಪ್ರಮೋಷನ್ ಕೌನ್ಸಿಲ್ ನಡೆಸುವ ಓಣಂ ಆಚರಣೆ ಸೆಪ್ಟಂಬರ್ 3ರಿಂದ 7ರ ತನಕ ಚೆರುವತ್ತೂರಿನಲ್ಲಿ ನಡೆಸಲು ತೀರ್ಮಾನಿಸಲಾಗಿದೆ. ಜಿಲ್ಲೆಯ ತನ್ನದೇ ಆದ ಕಲಾರೂಪಗಳ ಪ್ರದರ್ಶನ ಹಾಗೂ ವಿವಿಧ ಸಂಘಟನೆಗಳನ್ನು ಒಳಪಡಿಸಿ ಹಲವು ಕಲಾಕಾರ್ಯ ಕ್ರಮಗಳನ್ನು ಇದರ ಅಂಗವಾಗಿ ಹಮ್ಮಿಕೊಳ್ಳಲಾಗಿದೆ. ಹೂ ರಂಗೋಲಿ ಸ್ಪರ್ಧೆ, ವಿದ್ಯಾರ್ಥಿಗಳಿಗಾಗಿ ಪೈಂಟಿಂಗ್ ಸ್ಪರ್ಧೆಗಳು ನಡೆಯಲಿದೆ. ವಿಕಲಚೇತನರಾದ ಮಕ್ಕಳಿಗೆ ಓಣಂ ಔತಣಕೂಟ ಏರ್ಪಡಿಸಲಾಗುವುದು.
