ಮಾಯಿಪ್ಪಾಡಿ: ಮುಸ್ಲಿಂ ಲೀಗ್‌ನ ಹಿರಿಯ ಕಾರ್ಯಕರ್ತ, ಉಳಿಯತ್ತಡ್ಕದಲ್ಲಿ ಆಟೋ ಕಾರ್ಮಿಕನಾಗಿದ್ದ ಮಂಜತ್ತಡ್ಕ ನಿವಾಸಿ ಅಬೂಬಕ್ಕರ್ (56) ನಿಧನ ಹೊಂದಿದರು. ಮಧೂರು ಪಂ.ಮುಸ್ಲಿಂ ಲೀಗ್ ಸಮಿತಿ ಸದಸ್ಯ ಎಸ್‌ಟಿಯು ಉಳಿಯತ್ತಡ್ಕ ಪೇಟೆ ಸಮಿತಿ, ಬದರ್ ಜುಮಾ ಮಸೀದಿ ಸಮಿತಿ, ಮಂಜತ್ತಡ್ಕ ದರ್ಗಾ ಮಸೀದಿ ಸಮಿತಿಯಲ್ಲೂ ಪದಾಧಿಕಾರಿಯಾಗಿದ್ದರು. ಮೃತರು ಪತ್ನಿ ನಬೀಸ, ಮಕ್ಕಳಾದ ನಿಜಾಮ್, ಪವಾಸ್, ಫಯಾಸ್, ಫಮೀದ, ಫಸೀಲ, ಫಾಸಿಲ, ಅಳಿಯಂದಿರಾದ ಅಶ್ರಫ್ ಮುಗು, ರಂಜಾನ್ ಮಣಿಯಂಪಾರೆ, ಸೊಸೆ ರಹಲಾ, ಸಹೋದರರಾದ ಅಬ್ದುಲ್ ರಹ್ಮಾನ್, ಹಮೀದ್, ಅಲಿ, ಮುಸ್ತಫ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.
