ಮೀಯಪದವು: ವಿಶ್ವ ಹಿಂದೂ ಪರಿಷತ್ ಮೀಂಜ ಖಂಡ ಸಮಿತಿ ವತಿಯಿಂದ ಮೀಯಪದವು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಸಿಂಹ ಮಾಸ ಬಲಿವಾಡು ಕೂಟ ಈ ತಿಂಗಳ 23ರಂದು ಬೆಳಿಗ್ಗೆ 9ರಿಂದ ನಡೆಯಲಿದೆ. ಇದೇ ವೇಳೆ ವಿಶೇಷ ಭಜನಾ ಸಂಭ್ರಮ, ಸತ್ಸಂಗ ಹಾಗೂ ಹಿರಿಯ ಭಜನಾ ಸಾಧಕರಿಗೆ ಗೌರವಾರ್ಪಣೆ ನಡೆಯಲಿದೆ.
ಬೆಳಿಗ್ಗೆ 9 ಗಂಟೆಗೆ ಭಜನಾ ಸಂಭ್ರಮ ಆರಂಭಗೊಳ್ಳಲಿದೆ. ಕ್ಷೇತ್ರದ ಮೊಕ್ತೇಸರ ವಸಂತ ಭಟ್ ತೊಟ್ಟೆತ್ತೋಡಿ ದೀಪ ಪ್ರಜ್ವಲನೆ ಗೈಯ್ಯುವರು. 11 ಗಂಟೆಗೆ ಸತ್ಸಂಗ ನಡೆಯಲಿದ್ದು, ವಿ.ಹಿಂ.ಪ. ಜಿಲ್ಲಾಧ್ಯಕ್ಷ ಜಯದೇವ ಖಂಡಿಗೆ ಅಧ್ಯಕ್ಷತೆ ವಹಿಸುವರು. ಶ್ರೀ ಕ್ಷೇತ್ರ ಧರ್ಮಸ್ಥಳ ಭಜನಾ ಪರಿಷತ್ ಕಾಸರಗೋಡು ಇದರ ಸಂಚಾಲಕ ಹರಿದಾಸ್ ಜಯಾನಂದ ಕುಮಾರ್ ಹೊಸದುರ್ಗ, ವಿಎಚ್‌ಪಿ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಸಂಕಪ್ಪ ಭಂಡಾರಿ ಬಳ್ಳಂಬೆಟ್ಟು, ಭಜನಾ ಪರಿಷತ್ ಮಂಜೇಶ್ವರ ತಾಲೂಕು ಅಧ್ಯಕ್ಷ ದಿನೇಶ್ ಚೆರುಗೋಳಿ, ಭಜನಾ ಪರಿಷತ್ ಕಾಸರಗೋಡು ತಾಲೂಕು ಅಧ್ಯಕ್ಷ ವೆಂಕಟ್ರಮಣ ಹೊಳ್ಳ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ವೇದಮೂರ್ತಿ ಗಣೇಶ್ ನಾವಡ ಚಿಗುರುಪಾದೆ, ಸತೀಶ್ಚಂದ್ರ ರೈ ದೇರಂಬಳ, ದಿನೇಶ್ ಅಮ್ಮೆನಡ್ಕ, ಜಗದೀಶ್ ಆಳ್ವ ದೇರಂಬಳಗುತ್ತು ಉಪಸ್ಥಿತರಿರುವರು. ಭಜನಾ ಸಾಧಕರಾದ ಕೆ. ಸುಬ್ರಹ್ಮಣ್ಯ ಭಟ್ ಕೊಳಚಪ್ಪು, ಗಣಪತಿ ಭಟ್ ಅಮ್ಮೆನಡ್ಕ ಮುತ್ತು ಶೆಟ್ಟಿ ಬಾಳ್ಯೂರು, ಮಾಧವ ಆಚಾರ್ಯ ಮದಂಗಲ್ಲುಕಟ್ಟೆ, ಬಾಲಕೃಷ್ಣ ಶೆಟ್ಟಿ ಕುಳೂರು, ನಾರಾಯಣ ಮಡಿವಾಳ ಪೆಲತ್ತೋಡಿ, ಜನಾರ್ದನ ಆಚಾರ್ಯ ಕುಳೂರು, ರಾಮ ಎಸ್. ಎಲಿಯಾಣ, ಉಮಾವತಿ ಅಮ್ಮೆನಡ್ಕ, ಭುವನೇಶ್ವರಿ ಭಟ್ ಮಿತ್ತಾಳರನ್ನು ಗೌರವಿಸಲಾಗುವುದು. ಅಶ್ವಿನಿ ಕಲ್ಲಗದ್ದೆ, ಜಯಲಕ್ಷ್ಮಿ ಚಿಗುರುಪಾದೆ ಉಪಸ್ಥಿತರಿರುವರು. ಮಧ್ಯಾಹ್ನ ಮಹಾಪೂಜೆ ಬಳಿಕ ಭಜನೆ ಮುಂದುವರಿಯಲಿದೆ.