ಮಂಜೇಶ್ವರ: ಬೇಟೆಗಾಗಿ ವರ್ಕಾಡಿಗೆ ತಲುಪಿದ ಕುತ್ತಿಕೋಲ್ ನಿವಾಸಿಗಳನ್ನು ಅಪಹರಿಸಿ ಹಲ್ಲೆಗೈದು ಬಂದೂಕು, ಮದ್ದುಗುಂಡುಗಳು ಹಾಗೂ ಹಣ ದರೋಡೆ ನಡೆಸಿದ ಪ್ರಕರಣದಲ್ಲಿ ಇನ್ನೋರ್ವನನ್ನು ಸೆರೆಹಿಡಿಯಲಾಗಿದೆ.
ವರ್ಕಾಡಿ ಪುರುಷಂಗೋಡಿಯ ಮುಹಮ್ಮದ್ ರಾಸಿಕ್ (25) ಎಂಬಾ ತನನ್ನು ಮಂಜೇಶ್ವರ ಪೊಲೀಸ್ ಇನ್ ಸ್ಪೆಕ್ಟರ್ ಇ. ಅನೂಬ್ ಕುಮಾರ್ ಹಾಗೂ ತಂಡ ಕರ್ನಾಟ ಕದ ದ.ಕ. ಜಿಲ್ಲೆಯ ಮಂಚಿ ಎಂಬಲ್ಲಿಂದ ಸೆರೆಹಿಡಿದಿದೆ.ಕುತ್ತಿಕ್ಕೋಲ್ ನಿವಾಸಿ ನಿತಿನ್ರಾಜ್ ಹಾಗೂ ಸ್ನೇಹಿತರು ಬೇಟೆಗಾಗಿ ವರ್ಕಾಡಿಗೆ ತಲುಪಿದ್ದರು. ಈ ವೇಳೆ ಅಲ್ಲಿಗೆ ತಲುಪಿದ ಅಂಗಡಿಪದವಿನ ಸೈಫುದ್ದೀನ್ ಯಾನೆ ಪೂಚ ಸೈಪರ್ (29), ಕಾಸರಗೋಡು ಹಿದಾಯತ್ ನಗರದ ಮೊಯ್ದೀನ್ ಯಾನೆ ಚುರುಮುರು ಮೊಯ್ದೀನ್ (29), ಉಳಿಯತ್ತಡ್ಕ ನೇಶನಲ್ ನಗರದ ಮುಹಮ್ಮದ್ ಸುಹೈಲ್ (28) ಹಾಗೂಈಗ ಸೆರೆಗೀಡಾದ ಮುಹಮ್ಮದ್ ರಾಸಿಕ್ ಸೇರಿ ಬೇಟೆಗಾಗಿ ಬಂದವರನ್ನು ಅಪಹರಿಸಿ ದರೋಡೆ ನಡೆಸಿದ್ದಾರೆಂದು ಪೊಲೀಸರು ದಾಖಲಿ ಸಿದ ಪ್ರಕರಣ ದಲ್ಲ್ಲಿ ತಿಳಿಸಲಾಗಿದೆ. ಅಂದು ನಾಲ್ಕು ಮಂದಿ ಆರೋಪಿಗಳನ್ನು ಸೆರೆಹಿಡಿದಿ ದ್ದು ಈ ವೇಳೆ ಮುಹಮ್ಮದ್ ರಾಸಿಕ್ ಪರಾರಿಯಾಗಿದ್ದನು.
ಮೊನ್ನೆ ಸಂಜೆ ಈತ ಕಡಂಬಾರ್ನಲ್ಲಿದ್ದಾನೆಂಬ ಬಗ್ಗೆ ಮಾಹಿತಿ ಲಭಿಸಿ ಇನ್ಸ್ಪೆಕ್ಟರ್ ಅನೂಬ್ ಕುಮಾರ್, ಎಎಸ್ಐ ಅತಲ್ರಾಮ್, ಪೊಲೀಸರಾದ ವಿಜಯನ್, ಸಲೀಂ ಅಲ್ಲಿಗೆ ತಲುಪಿದ್ದರು. ಪೊಲೀಸರ ವಾಹನವನ್ನು ಕಂಡೊಡನೆ ಮುಹಮ್ಮದ್ ರಾಸಿಕ್ ಕಾರಿನಲ್ಲಿ ಅಪರಿಮಿತ ವೇಗದಲ್ಲಿ ಪರಾರಿಯಾಗಿದ್ದನು. ಪೊಲೀಸರು ಹಿಂಬಾಲಿಸುತ್ತಿದ್ದಂತೆ ಕಾರು ಕೇರಳ ಗಡಿ ದಾಟಿ ಕರ್ನಾಟಕಕ್ಕೆ ಪ್ರವೇಶಿಸಿತು. ಆದರೂ ಹಿಂಜರಿಯದ ಪೊಲೀಸರು ಆತನನ್ನು ಹಿಂಬಾಲಿಸಿದ್ದರು. ಈ ವೇಳೆ ಮುಹಮ್ಮದ್ ರಾಸಿಕ್ನ ಕಾರು ಮಂಚಿಯಲ್ಲಿ ಬೇರೊಂದು ಕಾರಿಗೆ ಢಿಕ್ಕಿ ಹೊಡೆದಿದೆ. ಕೂಡಲೇ ಕಾರಿನಿಂದಿಳಿದು ಪರಾರಿಯಾಗಲೆ ತ್ನಿಸಿದ ಆತನನ್ನು ಪೊಲೀಸರು ಬೆನ್ನಟ್ಟಿದ್ದು, ವಿಷಯ ತಿಳಿದ ಸ್ಥಳೀಯರು ಪೊಲೀಸರಿಗೆ ಸಹಾ ಯವೊದಗಿಸಿದ್ದರು. ಇದರಿಂದ ಆರೋ ಪಿಯನ್ನು ಅಲ್ಲಿಂದ ಸೆರೆಹಿಡಿಯಲು ಸಾಧ್ಯ ವಾಯಿತು. ಬಂಧಿತ ಆರೋಪಿಯನ್ನು ಮಂಜೇಶ್ವರ ಠಾಣೆಗೆ ತಲುಪಿಸಿ ಬಳಿಕ ನ್ಯಾಯಾ ಲಯದಲ್ಲಿ ಹಾಜರುಪಡಿಸಲಾ ಯಿತು. ಈ ವೇಳೆ ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಲಾಯಿತು.