ತಿರುವನಂತಪುರ: ಪೀರುಮೇಡ್ ಶಾಸಕ ವಾಯೂ ರ್ ಸೋಮನ್ (72) ನಿಧನ ಹೊಂದಿದರು. ಟಿ.ಪಿ.ನಗರದಲ್ಲಿ ಕಂದಾಯ ಇಲಾಖೆಯ ಇಡುಕ್ಕಿ ಜಿಲ್ಲಾ ಸಭೆಯಲ್ಲಿ ಭಾಗವಹಿಸಿದ ಬಳಿಕ ಹಿಂತಿರುಗುವ ಮಧ್ಯೆ ಇವರಿಗೆ ಹೃದಯಾಘಾತ ವುಂಟಾಗಿದೆ. ಬಳಿಕ ಕಂದಾಯ ಸಚಿವರ ವಾಹನದಲ್ಲಿ ಕೂಡಲೇ ಶಾಸ್ತಾಮಂಗಲದ ಆಸ್ಪತ್ರೆಗೆ ತಲುಪಿ ಸಲಾಗಿದೆ. ಇಡುಕ್ಕಿ ಪೀರುಮೇಡ್ ನಿಂದ ಆಯ್ಕೆಗೊಂಡ ಸಿಪಿಐ ಶಾಸಕ ರಾಗಿದ್ದಾರೆ ವಾಯೂರ್ ಸೋಮನ್.
ವೇರ್‌ಹೌಸಿಂಗ್ ಕಾರ್ಪ ರೇಶನ್‌ನ ಅಧ್ಯಕ್ಷ, ಎಐಟಿಯುಸಿ ರಾಜ್ಯ ಉಪಾಧ್ಯಕ್ಷ ಮೊದಲಾದ ಹುದ್ದೆಗಳನ್ನು ವಹಿಸಿದ್ದರು. ಮೃತರು ಪತ್ನಿ ಬಿಂದು, ಮಕ್ಕಳಾದ ನ್ಯಾಯವಾದಿ ಸೋಬಿನ್, ನ್ಯಾಯವಾದಿ ಸೋಬಿತ್ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.