ತಿರುವನಂತಪುರ: ಕೇರಳ ಶಾಲಾ ಒಲಿಂಪಿಕ್ಸ್ನಲ್ಲಿ ಅತೀ ಹೆಚ್ಚು ಅಂಕ ಗಳಿಸುವ ಜಿಲ್ಲೆಗೆ ಈ ವರ್ಷದಿಂದ ಮುಖ್ಯಮಂತ್ರಿಯ ಚಿನ್ನದ ಕಪ್ ಬಹುಮಾನವಾಗಿ ನೀಡಲಾಗುವುದು. ಶಾಲಾ ಒಲಿಂಪಿಕ್ಸ್ ಸಂಘಾಟಕ ಸಮಿತಿ ರೂಪೀಕರಣ ಸಭೆಯನ್ನು ತಿರುವನಂ ತಪುರದಲ್ಲಿ ಉದ್ಘಾಟಿಸಿ ಶಿಕ್ಷಣ ಸಚಿವ ಶಿವನ್ ಕುಟ್ಟಿ ಈ ವಿಷಯ ತಿಳಿಸಿದ್ದಾರೆ. ರಾಜ್ಯ ಶಾಲಾ ಕ್ರೀಡಾಕೂಟ ಈ ವರ್ಷ ಅಕ್ಟೋಬರ್ 22ರಿಂದ 28ರ ವರೆಗೆ ತಿರುವನಂತಪುರದಲ್ಲಿ ನಡೆಯ ಲಿದೆ. ಕಳೆದ ವರ್ಷ ಕೊಚ್ಚಿಯಲ್ಲಿ ಒಲಿಂಪಿಕ್ಸ್ ಮಾದರಿಯಲ್ಲಿ ನಡೆದ ರಾಜ್ಯ ಶಾಲಾ ಕ್ರೀಡಾ ಕೂಟದಲ್ಲಿ 24,000 ಕ್ರೀಡಾಪಟುಗಳು ಭಾಗವಹಿಸಿದ್ದರು. ಈ ವರ್ಷದಿಂದ ಯು,ಎ.ಇಯಿಂ ದಲೂ ಹೆಣ್ಮಕ್ಕಳನ್ನು ಶಾಲಾ ಒಲಿಂಪಿಕ್ಸ್ನಲ್ಲಿ ಪಾಲ್ಗೊಳ್ಳಿಸಲಾಗುವುದು.
