ಕುಂಬಳೆ: ಕಟ್ಟಡ ನಿರ್ಮಾಣ ಕಾರ್ಮಿಕನೋರ್ವ ನಾಪತ್ತೆಯಾದ ಬಗ್ಗೆ ದೂರಲಾಗಿದೆ. ಕುಂಬಳೆ ದೇವೀನಗರ ನಿವಾಸಿ ಸೆಲ್ವರಾಜ್ (61) ನಾಪತ್ತೆಯಾದ ವ್ಯಕ್ತಿಯಾಗಿ ದ್ದಾರೆ. ಈ ತಿಂಗಳ 16ರಂದು ಸಂಜೆ ಇವರು ಮನೆಯಿಂದ ಹೊರಗೆ ತೆರಳಿದವರು ಮರಳಿ ಬಂದಿಲ್ಲ. ವಿವಿಧೆಡೆ ಹುಡುಕಾ ಡಿದರೂ ಪತ್ತೆಯಾಗದ ಹಿನ್ನೆಲೆಯಲ್ಲಿ ಪುತ್ರ ಮಣಿಕಂಠನ್ ನಿನ್ನೆ ಕುಂಬಳೆ ಪೊಲೀಸರಿಗೆ ದೂರು ನೀಡಿದ್ದಾರೆ. ಮನೆಯಿಂದ ಹೊರಗೆ ತೆರಳುವ ವೇಳೆ ಸೆಲ್ವರಾಜ್‌ರ ಕೈಯಲ್ಲಿ 20 ಸಾವಿರ ರೂಪಾಯಿ ನಗದು ಇತ್ತೆಂದು ದೂರಿನಲ್ಲಿ ತಿಳಿಸಲಾ ಗಿದೆ. ಮೊಬೈಲ್ ಫೋನ್ ಮನೆಯಲ್ಲೇ ಇರಿಸಿ ಸೆಲ್ವರಾಜ್ ತೆರಳಿರುವುದಾಗಿ ತಿಳಿಸಲಾಗಿದೆ.
