ಮಂಜೇಶ್ವರ: ಕಾರಿನಲ್ಲಿ ಸಾಗಿಸುತ್ತಿದ್ದ ಎರಡು ಕಿಲೋ ಗಾಂಜಾ ಹಾಗೂ 28 ಗ್ರಾಂ ಎಂಡಿಎಂಎ ಯನ್ನು ಮಂಜೇಶ್ವರ ಪೊಲೀಸರು ವಶಪಡಿಸಿಕೊಂಡು ಈ ಸಂಬಂಧ ಮೂವರನ್ನು ಬಂಧಿಸಿದ್ದಾರೆ. ಸೆರೆಗೀ ಡಾದವರು ಕರ್ನಾಟಕ ಬಂಟ್ವಾಳ ನಿವಾಸಿಗಳಾಗಿದ್ದಾರೆ. ಇವರನ್ನು ತನಿಖೆಗೊಳಪಡಿಸಲಾಗುತ್ತಿದೆ. ಇಂದು ಮುಂಜಾನೆ ಮಂಜೇಶ್ವರ ಪೊಲೀಸ್ ಇನ್ಸ್ಪೆಕ್ಟರ್ ಇ. ಅನೂಬ್ ಕುಮಾರ್ರ ನೇತೃತ್ವದಲ್ಲಿ ತಲಪಾಡಿಯಲ್ಲಿ ನಡೆಸಿದ ವಾಹನ ತಪಾಸಣೆ ವೇಳೆ ಮಾದಕವಸ್ತು ವಶಪಡಿಸಲಾಗಿದೆ. ಪೊಲೀಸರು ನಿಲ್ಲಿಸಲು ಸೂಚಿಸಿದಾಗ ಕಾರನ್ನು ನಿಲ್ಲಿಸಿದ ತಂಡದ ಓರ್ವ ಓಡಿ ಪರಾರಿಯಾಗಲು ಯತ್ನಿಸಿದ್ದನು. ಆತನನ್ನು ಬೆನ್ನಟ್ಟಿ ಪೊಲೀಸರು ಸೆರೆಹಿಡಿದಿದ್ದಾರೆ. ಬಳಿಕ ಕಾರಿನೊಳಗೆ ನಡೆಸಿದ ಶೋಧ ವೇಳೆ ಗಾಂಜಾ, ಎಂಡಿಎಂಎ ಪತ್ತೆಯಾಗಿದೆ. ಇವುಗ ಳನ್ನು ಕಣ್ಣೂರಿಗೆ ಕೊಂಡೊಯ್ಯಲಾ ಗುತ್ತಿದೆಯೆಂದು ಸೂಚನೆ ಲಭಿಸಿದೆ.
