ಕಾಸರಗೋಡು: ಕಾಸರ ಗೋಡು ಸೂರ್ಲು ಬಟ್ಟಂಪಾರೆ ನಂದಿನಿ ನಿವಾಸದ ಸುರೇಶ್ ಕೆ (73) ಅಸೌಖ್ಯ ನಿಮಿತ್ತ ಮಂ ಗಳೂರಿನ ಆಸ್ಪತ್ರೆಯಲ್ಲಿ ನಿಧನ ಹೊಂದಿದರು. ದೀರ್ಘಕಾಲ ರಾಷ್ಟ್ರೀಕೃತ ಬ್ಯಾಂಕೊಂದರ ಪಿಗ್ಮಿ ಕಲೆಕ್ಷನ್ ಏಜೆಂಟ್ ಆಗಿ ಸೇವೆ ಸಲ್ಲಿಸಿದ್ದರು.
ಇವರು ಕಾಸರಗೋಡು ಎ.ಟಿ ರಸ್ತೆಯ ಆನೆಬಾಗಿಲು ತರವಾಡಿನ ಮಾಜಿ ಅಧ್ಯಕ್ಷರು ಹಾಗೂ ಹಾಲಿ ರಕ್ಷಾಧಿಕಾರಿ, ತಳಂಗರೆ ಪಿಲಿಕುಂಜೆ ಭಗವತೀ ಕ್ಷೇತ್ರದ ಬಟ್ಟಂಪಾರೆ ಪ್ರಾದೇಶಿಕ ಸಮಿತಿಯ ಅಧ್ಯಕ್ಷರೂ ಆಗಿದ್ದಾರೆ.
ಮೃತರು ಪತ್ನಿ ಕೆ.ಟಿ. ಶುಭ, ಮಕ್ಕಳಾದ ಪ್ರಶೋಬ್ ಕೆ.ಟಿ, ಸುಮಾ ಕೆ.ಟಿ, ಅಳಿಯ ಅನುರಾಗ್, ಸೊಸೆ ರಜಿತ, ಸಹೋದರ ಭಾಸ್ಕರನ್ ಸಿ. ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.