ಮೀನು ಕಾರ್ಮಿಕ ನೇಣುಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆ

ಕುಂಬಳೆ: ಮೀನು ಕಾರ್ಮಿಕ ನೋರ್ವ ಮನೆಯೊಳಗೆ ನೇಣುಬಿಗಿದು ಸಾವಿಗೀ ಡಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.  ಕುಂಬಳೆ ದೇವೀನಗರ ತ್ಸುನಾಮಿ ಕಾಲನಿಯ ಅಬ್ದುಲ್ಲ (55) ಮೃತಪಟ್ಟ ವ್ಯಕ್ತಿ. ನಿನ್ನೆ ರಾತ್ರಿ ಇವರು ಊಟಮಾಡಿ ನಿದ್ರಿಸಿದ್ದರು. ಇಂದು ಮುಂಜಾನೆ 5 ಗಂಟೆಗೆ  ಮನೆಯವರು ಎಚ್ಚೆತ್ತಾಗ ಅಬ್ದುಲ್ಲ ಅಡುಗೆ ಕೋಣೆಯಲ್ಲಿ ನೇಣುಬಿಗಿದು ಮೃತಪಟ್ಟಿರುವುದು ಕಂಡುಬಂದಿದೆ. ಈ ಬಗ್ಗೆ ಮನೆಯವರು ನೀಡಿದ ಮಾಹಿತಿಯಂತೆ ಪೊಲೀಸರು ಸ್ಥಳಕ್ಕೆ ತಲುಪಿ ಮೃತದೇಹವನ್ನು ಕೆಳಕ್ಕಿಳಿಸಿದ್ದಾರೆ. ಇದೇ ವೇಳೆ ಮೃತದೇಹ ಪತ್ತೆಯಾದ ಸ್ಥಳದಲ್ಲಿ ಒಂದು ಬ್ಲೇಡ್ ಹಾಗೂ ರಕ್ತದ ಕಲೆಗಳು ಪತ್ತೆಯಾಗಿದೆ. ಈ ಹಿನ್ನೆಲೆಯಲ್ಲಿ ಮನೆಯವರನ್ನು ಹೊರಗೆ ನಿಲ್ಲಿಸಿ ಪೊಲೀಸರು ಮನೆಗೆ ಕಾವಲು ಏರ್ಪಡಿಸಿದ್ದಾರೆ.

ಮೃತರು ಪತ್ನಿ ಸುಹರಾ, ಮಕ್ಕಳಾದ  ಆಶಿಫ್, ಮುಬಶಿರ್, ನಜೀಬ, ಅಳಿಯ ಹೈದರಲಿ, ಸೊಸೆ ಸೈದ, ಸಹೋದರ-ಸಹೋದರಿಯರಾದ ಅಬೂಬಕರ್, ಯಾಕೂಬ್, ಶಕೀಲ್, ಹಸೀನ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

You cannot copy contents of this page