ಮಹಿಳೆಯರೊಂದಿಗೆ ಅನುಚಿತ ವರ್ತನೆ: ಶಾಸಕ ಸ್ಥಾನಕ್ಕೆ ರಾಹುಲ್ ಮಾಕೂಟ್ಟತ್ತಿಲ್ ರಾಜೀನಾಮೆಗೆ ಬಿಜೆಪಿ, ಸಿಪಿಎಂ ಪಟ್ಟು

ತಿರುವನಂತಪುರ: ಮಹಿಳೆಯರೊಂ ದಿಗೆ ಅನುಚಿತ ರೀತಿಯಲ್ಲಿ ವರ್ತಿಸಿದ ಆರೋಪ ಉಂಟಾದ ಬೆನ್ನಲ್ಲೇ ಯೂತ್ ಕಾಂಗ್ರೆಸ್‌ನ ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಪಾಲಕ್ಕಾಡ್ ಶಾಸಕ ರಾಹುಲ್ ಮಾಕೂಟತ್ತಿಲ್ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಬೇ ಕೆಂಬ ಪಟ್ಟು ಹಿಡಿದು ಬಿಜೆಪಿ ಮತ್ತು ಸಿಪಿಎಂ ಪ್ರತ್ಯಕ್ಷ ಹೋರಾಟ ಆರಂಭಿಸಿದೆ. ಇದೇ ಸಂದರ್ಭದಲ್ಲಿ ಇನ್ನೊಂದೆಡೆ ಕಾಂಗ್ರೆಸ್‌ನ ಕೇರಳ ಘಟಕವೂ ರಾಹುಲ್‌ರ ವಿರುದ್ಧ ಉಂಟಾಗಿರುವ ಆರೋಪದ ಬಗ್ಗೆ ಸಮಗ್ರ ತನಿಖೆ ಆರಂಭಿಸಿದೆ.

ಆರೋಪದ ಹಿನ್ನೆಲೆಯಲ್ಲಿ ಯೂತ್ ಕಾಂಗ್ರೆಸ್ ರಾಜ್ಯ ಅಧ್ಯಕ್ಷ ಸ್ಥಾನಕ್ಕೆ ನಾನು ಸ್ವಯಂ ಆಗಿ   ರಾಜೀ ನಾಮೆ ನೀಡಿದ್ದೇನೆಂದು ರಾಹುಲ್ ಹೇಳುತ್ತಿದ್ದರೂ ಕಾಂಗ್ರೆಸ್ ಹೈಕಮಾಂಡ್‌ನ ಒತ್ತಡಕ್ಕೆ ಮಣಿದು ಅವರು ರಾಜೀನಾಮೆ ನೀಡಿದ್ದರೆನ್ನಲಾಗಿದೆ.

ಸಿನಿಮಾ ನಟಿ ರಿನಿ ಅನ್ ಜೋರ್ಜ್ ಬುಧವಾರ ನೀಡಿದ ಹೇಳಿಕೆಯೊಂದರಲ್ಲಿ ರಾಹುಲ್‌ರ ಹೆಸರನ್ನು ನೇರವಾಗಿ ಉಲ್ಲೇಖಿಸದೆ ತನ್ನ ವಿರುದ್ಧ ಯುವ ನೇತಾರನೋರ್ವ ಅನುಚಿತವಾಗಿ ವರ್ತಸಿದ್ದಾರೆಂದು ಆರೋಪಿಸಿದ್ದರು. ಅದಾದ ಬೆನ್ನಲ್ಲೇ ಖ್ಯಾತ ಲೇಖಕಿ ಹನಿ ಭಾಸ್ಕರನ್ ರಾಹುಲ್‌ನ ಹೆಸರನ್ನೇ ನೇರವಾಗಿ ಉಲ್ಲೇಖಿಸಿ ಅವರ ವಿರುದ್ದ ಆರೋಪ ಹೊರಿಸಿ ರಂಗಕ್ಕಿಳಿದಿದ್ದರು. ಅಂತಹ ಆರೋಪಗಳ ಹೇಳಿಕೆಗಳು  ಹೊರಬಂದಿರುವುದು ಕಾಂಗ್ರಸ್‌ನ್ನು ತೀವ್ರ ಒತ್ತಡಕ್ಕೆ ಸಿಲುಕುವಂತೆ ಮಾಡಿತ್ತು. ಅದಾದ ಬೆನ್ನಲ್ಲೇ ರಾಹುಲ್ ನಿನ್ನೆ ಮಧ್ಯಾಹ್ನ ತಮ್ಮ ರಾಜ್ಯ ಯೂತ್ ಕಾಂಗ್ರೆಸ್ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಆದರೆ ತನ್ನ ಶಾಸಕ ಸ್ಥಾನಕ್ಕೆ  ರಾಜೀನಾಮೆ ನೀಡೆನೆಂದು ಅವರು ಸ್ಪಷ್ಟಪಡಿಸಿದ್ದಾರೆ. ನನ್ನ ವಿರುದ್ಧ ಉಂಟಾದ ಆರೋಪಗಳೆಲ್ಲ ಹುಸಿಯಾದುದಾಗಿದೆ. ಈ ವಿಷಯದಲ್ಲಿ ನಾನು ನಿರಪರಾಧಿಯಾಗಿದ್ದೇನೆ ಎಂದು ಇದಕ್ಕೆ ರಾಹುಲ್ ಪ್ರತಿಕ್ರಿಯೆ ನೀಡಿದ್ದಾರೆ. ರಾಹುಲ್‌ರ ವಿರುದ್ಧ ಆರೋಪ ಎದ್ದುಬಂದ ಬೆನ್ನಲ್ಲೇ ಮಹಿಳೆಮೋರ್ಛಾ ನೇತೃತ್ವದಲ್ಲಿ  ಕಾರ್ಯಕರ್ತರು  ಕೋಳಿಗಳನ್ನು ಕೈಯಲ್ಲಿ ಹಿಡಿದುಕೊಂಡು ಪಾಲಕ್ಕಾಡ್‌ನಲ್ಲಿರುವ ರಾಹುಲ್ ಮಾಕೂಟ್ಟತ್ತಿಲ್‌ರ ಶಾಸಕ ಕಚೇರಿಗೆ ನಿನ್ನೆ ಪ್ರತಿಭಟನಾ ಮೆರವಣಿಗೆ ನಡೆಸಿದರು. ಆರೋಪದ ನೈತಿಕ ಹೊಣೆ ಹೊತ್ತು ರಾಹುಲ್ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಮಹಿಳಾ ಮೋರ್ಛಾ ನೇತಾರೆಯರು ಆಗ್ರಹಪಟ್ಟಿ ದ್ದಾರೆ.  ಶಾಸಕ ಸ್ಥಾನಕ್ಕೆ ರಾಹುಲ್ ರಾಜೀ ನಾಮೆ ನೀಡುವ ತನಕ ನಮ್ಮ ಹೋರಾ ಟ ಮುಂದುವರಿಯ ಲಿದೆಯೆಂದು ಇನ್ನೊಂದೆಡೆ ಬಿಜೆಪಿ ಮತ್ತು ಸಿಪಿಎಂ ನೇತಾರರು ತಿಳಿಸಿದ್ದಾರೆ.

You cannot copy contents of this page