ಕಾಸರಗೋಡು: ರಸ್ತೆ ಎಷ್ಟೇ ಅಭಿವೃದ್ಧಿ ಹೊಂದಿದರೂ ಕಾಸರಗೋಡು ಪೇಟೆಯ ಸಾರಿಗೆ ಸಂಚಾರ ತಡೆಗೆ ಪರಿಹಾರ ವಾಗುವುದಿಲ್ಲ. ಕಾಸರಗೋಡು ಹೊಸ ಬಸ್ ನಿಲ್ದಾಣದ ಸರ್ಕಲ್‌ನಲ್ಲಿ ತೀವ್ರ ರೀತಿಯ ಸಾರಿಗೆ ಸಂಚಾರ ತಡೆ ಎದುರಿಸಲಾಗುತ್ತಿದೆ. ನಾಲ್ಕೂ ಕಡೆಗಳಿಂದಿರುವ ವಾಹನಗಳು ಜಂಕ್ಷನ್‌ಗೆ ತಲುಪುವಾಗ ಇಲ್ಲಿ ಭಾರೀ ಮಟ್ಟದ ಸಂಚಾರ ತಡೆ ಉಂಟಾಗುತ್ತಿದೆ. ಪೊಲೀಸರಿಗೆ ಕೂಡಾ ಇದನ್ನು ನಿಯಂತ್ರಿಸಲು ಸಾಧ್ಯವಾಗದಿರುವಾಗ ಆಟೋ ಕಾರ್ಮಿಕರು, ವ್ಯಾಪಾರಿಗಳು ಜೊತೆ ಗೂಡಿ ಸಂಚಾರ ನಿಯಂತ್ರಿಸಲಾಗುತ್ತಿದೆ. ಅಷ್ಟಕ್ಕೂ ತೀವ್ರಗೊಂಡ ಸಂಚಾರ ತಡೆ ಬೆಳಿಗ್ಗೆ ಮತ್ತು ಸಂಜ ಹೊತ್ತುಗಳಲ್ಲಿ ತಾರಕಕ್ಕೇರುತ್ತಿದೆ.
ರಾಷ್ಟ್ರೀಯ ಹೆದ್ದಾರಿಯ ಅಭಿವೃದ್ಧಿ ಅಂಗವಾಗಿ ನಗರದಲ್ಲಿ ರಸ್ತೆ ಅಭಿವೃದ್ಧಿ ಸಾಮಾನ್ಯವಾಗಿ ಮುಂದುವರಿ ಯುತ್ತಿರುವಾಗ ವಾಹನಗಳ ದಟ್ಟಣೆಯಿಂದಾಗಿ ಸಂಚಾರ ತಡೆ ಸೃಷ್ಟಿಯಾಗುತ್ತಿದೆ. ನಗರದ ಟ್ರಾಫಿಕ್ ವ್ಯವಸ್ಥೆಯಲ್ಲಿ ಸಂಪೂರ್ಣ ಬದಲಾ ವಣೆ ನಡೆಸಬೇಕೆಂದು ವ್ಯಾಪಾರಿಗಳು ಆಗ್ರಹಿಸಿದ್ದಾರೆ. ಈ ಬಗ್ಗೆ ಹಲವಾರು ನಿರ್ದೇಶಗಳನ್ನು ಈಗಾಗಲೇ ಸಂಬಂಧಪಟ್ಟವರಿಗೆ ಸಮರ್ಪಿಸಲಾಗಿದೆ.
ವನ್‌ವೇ ವ್ಯವಸ್ಥೆ, ರಿಂಗ್ ರೋಡ್ ಈ ರೀತಿಯ ಹಲವು ಯೋಜನೆಗಳು ಅಧಿಕಾರಿಗಳ ಪರಿಗಣನೆಯಲ್ಲಿದೆ. ಆದರೆ ಜ್ಯಾರಿಗೊಳಿಸಲಿರುವ ಕಾಲ ವಿಳಂಬವೇ ಪೇಟೆಯ ಸಾರಿಗೆ ತಡೆಗೆ ಕಾರಣವಾಗುತ್ತಿರುವುದು. ಸಾರಿಗೆ ತಡೆಯನ್ನು ಪರಿಹರಿಸಲು ತುರ್ತು ಕ್ರಮ ಕೈಗೊಳ್ಳಬೇಕೆಂದು ವ್ಯಾಪಾರಿಗಳು ಆಗ್ರಹಿಸಿದ್ದಾರೆ.