ಸಿ.ಎಚ್. ಸೆಂಟರ್‌ಗೆ ನೂತನ ಸಮಿತಿ ಅಬ್ದುಲ್ ಲತೀಫ್ ಉಪ್ಪಳ ಗೇಟ್ ಅಧ್ಯಕ್ಷ

ಕಾಸರಗೋಡು: ಸಾಂತ್ವನರಂಗದಲ್ಲಿ ಸ್ತುತ್ಯರ್ಹವಾದ ಚಟುವಟಿಕೆಗಳನ್ನು ನಡೆಸುವ ಕಾಸರಗೋಡು ಸಿಎಚ್ ಸೆಂಟರ್‌ನ ಅಧ್ಯಕ್ಷರಾಗಿ ಓಮನ್ ಚೇಂಬರ್ ಆಫ್ ಕಾಮರ್ಸ್ ನಿರ್ದೇಶಕ ಅಬ್ದುಲ್ ಲತೀಫ್ ಉಪ್ಪಳ ಗೇಟ್ ಹಾಗೂ ಪ್ರಧಾನ ಗೌರವಾಧ್ಯಕ್ಷರಾಗಿ  ಉದ್ಯಮಿ, ದುಬೈ ಕೆಎಂಸಿಸಿ ರಾಜ್ಯ ಪ್ರಧಾನ ಕಾರ್ಯದರ್ಶಿ ಯಾಹ್ಯಾ ತಳಂಗರೆ ಆಯ್ಕೆಯಾದರು. ಸಿಎಚ್ ಸೆಂಟರ್ ಮಹಾಸಭೆಯಲ್ಲಿ ಇವರನ್ನು ಆಯ್ಕೆ ಮಾಡಲಾಗಿದ್ದು, ಇತರ ಪದಾಧಿಕಾರಿಗಳಾಗಿ ಅಬ್ದುಲ್ ಕರೀಂ ಸಿಟಿಗೋಲ್ಡ್ (ಕಾರ್ಯಾಧ್ಯಕ್ಷ), ಮಾಹಿನ್ ಕೇಳೋಟ್ (ಜನರಲ್ ಕನ್ವೀನರ್), ಎನ್.ಎ ಅಬೂಬಕ್ಕರ್ ಹಾಜಿ (ಕೋಶಾಧಿಕಾರಿ), ಅಶ್ರಫ್ ಎಡನೀರು (ಕೋ-ಆರ್ಡಿನೇಟರ್), ಖಾದರ್ ಚೆಂಗಳ (ಗಲ್ಫ್ ಕೋ-ಆರ್ಡಿನೇಟರ್) ಆಯ್ಕೆಯಾದರು. ಮೆನೇಜಿಂಗ್ ಸಮಿತಿ ಸದಸ್ಯರಾಗಿ ಸಿ.ಟಿ. ಅಹಮ್ಮದಾಲಿ, ಕಲ್ಲಟ್ರ ಮಾಹಿನ್ ಹಾಜಿ, ಎ. ಅಬ್ದುಲ್ ರಹಿಮಾನ್, ಶಾಸಕರಾದ ಎನ್.ಎ. ನೆಲ್ಲಿಕುನ್ನು, ಎಕೆಎಂ ಅಶ್ರಫ್ ಸಹಿತ ಹಲವರು ಆಯ್ಕೆಯಾದರು.

ಕಾಸರಗೋಡು ನಗರಸಭಾ ಕಾನ್ಫರೆನ್ಸ್ ಸಭಾಂಗಣದಲ್ಲಿ ನಡೆದ ಮಹಾಸಭೆಯನ್ನು ಮುಸ್ಲಿಂ ಲೀಗ್ ಜಿಲ್ಲಾಧ್ಯಕ್ಷ ಕಲ್ಲಟ್ರ ಮಾಹಿನ್ ಹಾಜಿ ಉದ್ಘಾಟಿಸಿದರು. ಅಧ್ಯಕ್ಷ ಅಬ್ದುಲ್ ಲತೀಫ್ ಉಪ್ಪಳ ಗೇಟ್ ಅಧ್ಯಕ್ಷತೆ ವಹಿಸಿದರು. ಹಲವರು ಭಾಗವಹಿಸಿದರು.

You cannot copy contents of this page