ಕಾಸರಗೋಡು: ಕಲ್ಯೋಟ್ ಯೂತ್ ಕಾಂಗ್ರೆಸ್ ಕಾರ್ಯಕರ್ತರಾದ ಕೃಪೇಶ್ ಹಾಗೂ ಶರತ್‌ಲಾಲ್‌ರನ್ನು ಇರಿದು ಕೊಲೆಗೈದ ಪ್ರಕರಣದ ಇಬ್ಬರು ಆರೋಪಿಗಳಿಗೆ ಪರೋಲ್ ಮಂಜೂರು ಮಾಡಿದ ಸರಕಾರದ ಕ್ರಮವನ್ನು ಪ್ರತಿ ಭಟಿಸಿ ಯೂತ್ ಕಾಂಗ್ರೆಸ್ ಘೋಷಿಸಿದ್ದ ಪ್ರತಿಭಟನಾ ಮಾರ್ಚ್‌ಗೆ ಪೊಲೀಸರು ಅನುಮತಿ ನಿರಾಕರಿಸಿದ್ದಾರೆ. ಅನುಮತಿ ಲಭಿಸದಿದ್ದರೂ ಮಾರ್ಚ್ ನಡೆಸುವು ದಾಗಿ ಯೂತ್ ಕಾಂಗ್ರೆಸ್ ತಿಳಿಸಿದೆ.
ಘರ್ಷಣೆ ಸಾಧ್ಯತೆ ಇದೆ ಎಂಬ ರಹಸ್ಯ ತನಿಖಾ ವಿಭಾಗದ ವರದಿಗಳ ಹಿನ್ನೆಲೆಯಲ್ಲಿ ಪೊಲೀಸರು ಭಾರೀ ಭದ್ರತೆ ಏರ್ಪಡಿಸಿದ್ದಾರೆ. ಇದರಂಗವಾಗಿ ಕಣ್ಣೂರು ಮಾಂಙಾಟ್ ಪರಂಬ್ ಪೊಲೀಸ್ ಕ್ಯಾಂಪ್‌ನಿಂದ ೫೦ ಸಶಸ್ತ್ರ ಪೊಲೀಸರನ್ನು ಪೆರಿಯಕ್ಕೆ ಕರೆತರಲಾ ಗಿದೆ. ಇನ್ನೊಂದು ಸೂಚನೆ ನೀಡುವ ವರೆಗೆ ಕಣ್ಣೂರಿನಿಂದ ತಲುಪಿದ ಪೊಲೀಸ್ ತಂಡ ಪೆರಿಯ ಪೊಲೀಸ್ ಕ್ಯಾಂಪ್‌ನಲ್ಲಿ ಮುಂದುವರಿಯಲಿದೆ. ನಾಳೆ ಸಂಜೆ ೫ ಗಂಟೆಗೆ ಕಲ್ಯೋಟ್ ಸ್ಮೃತಿ ಕುಟೀರದಿಂದ ಮಾರ್ಚ್ ಆರಂ ಭಗೊಳ್ಳಲಿದೆ. ಮಾರ್ಚ್ ಏಚಿಲಡ್ಕಕ್ಕೆ ತಲುಪಿದ ಬಳಿಕ ಪ್ರತಿಭಟನಾ ಜ್ವಾಲೆ ಉರಿಸುವುದಕ್ಕೆ ಯೂತ್ ಕಾಂಗ್ರೆಸ್ ತೀರ್ಮಾನಿಸಿದೆ. ಆದರೆ ಮಾರ್ಚ್‌ಗೆ ಅನುಮತಿ ಇಲ್ಲ ಎಂಬ ವಿಷಯವನ್ನು ಬೇಕಲ ಪೊಲೀಸರು ಯೂತ್ ಕಾಂಗ್ರೆಸ್ ನಾಯಕತ್ವಕ್ಕೆ ತಿಳಿಸಿದ್ದಾರೆ. ಅವಳಿ ಕೊಲೆ ಪ್ರಕರಣದಲ್ಲಿ ಅವಳಿ ಜೀವಾವಧಿ ಸಜೆ ಲಭಿಸಿದ ದ್ವಿತೀಯ ಆರೋಪಿ ಏಚಿಲಡ್ಕದ ಕೆ. ಅನಿಲ್ ಕುಮಾರ್, ೮ನೇ ಆರೋಪಿ ವೆಳ್ತೋಳಿಯ ಸುಭೀಶ್ ಎಂಬಿವರಿಗೆ ಪೊಲೀಸ್ ವರದಿಯನ್ನು ಪರಿಗಣಿಸದೆ ಪರೋಲ್ ನೀಡಲಾಗಿದೆ. ಪರೋಲ್ ಲಭಿಸಿದರೂ ಇವರಿಗೆ ಬೇಕಲ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಪ್ರವೇಶಿಸಲು ಅನುಮತಿ ನೀಡಲಾಗಿಲ್ಲ. ಇಂದು ರಾತ್ರಿಯಿಂದ ಪೆರಿಯ, ಕಲ್ಯೋಟ್ ಪ್ರದೇಶಗಳಲ್ಲಿ ಪೊಲೀಸರು ಪಟ್ರೋಲಿಂಗ್ ಆರಂಭಿಸುವರು.