ತಿರುವನಂತಪುರ: ಯುವತಿಯ ರೊಂದಿಗೆ ಅನುಚಿತ ರೀತಿಯಲ್ಲಿ ವರ್ತಿ ಸಿದ ಗಂಭೀರ ಆರೋಪ ಎದುರಿಸುತ್ತಿ ರುವ ಪಾಲಕ್ಕಾಡ್ ಶಾಸಕ ರಾಹುಲ್ ಮಾಕೂಟತ್ತಿಲ್‌ರ ವಿಷಯದಲ್ಲಿ ಕಾಂಗ್ರೆಸ್ ರಾಜ್ಯ ಘಟಕದಲ್ಲೇ ಅಸಂತೃಪ್ತಿ ಹೊಗೆಯಾಡತೊಡಗಿದೆ. ಕೇವಲ ತಾಂತ್ರಿಕತೆಯ ಹೆಸರಲ್ಲಿ ರಾಹುಲ್‌ರ ಸಂರಕ್ಷಣೆ ನೀಡುವುದು ಪಕ್ಷಕ್ಕೆ ಪ್ರತಿ ಕೂಲಕರವಾಗಿ ಪರಿಣಮಿಸಲಿದೆಯೆಂದು ಕಾಂಗ್ರೆಸ್ ರಾಜ್ಯ ಘಟಕದ ಒಂದು ವಿಭಾಗ ಪ್ರಶ್ನಿಸತೊಡಗಿದೆ.
ರಾಹುಲ್ ವಿರುದ್ಧ ಈಗ ಯಾವುದೇ ಪ್ರಕರಣಗಳಾಗಲೀ, ದೂರು ಗಳಾಗಲೀ ಸಲ್ಲಿಸಲ್ಪಡದ ಹಿನ್ನೆಲೆಯಲ್ಲಿ ಈ ವಿಷಯದಲ್ಲಿ ಅವರ ವಿರುದ್ಧ ಕಠಿಣ ನಿಲುವು ಕೈಗೊಳ್ಳುವ ಅಗತ್ಯವಿದೆಯೇ ಎಂದು ಕಾಂಗ್ರೆಸ್‌ನ ಇನ್ನೊಂದು ವಿಭಾಗ ಪ್ರಶ್ನಿಸತೊಡಗಿದೆ. ಇಂತಹ ಬೆಳವಣಿಗೆ ಶಾಸಕ ಸ್ಥಾನದಲ್ಲಿ ರಾಹುಲ್ ಇನ್ನೂ ಮುಂದುವರಿಯುವುದು ಔಚಿತ್ಯವೇ ಎಂಬ ಪ್ರಶ್ನೆಯೂ ಕಾಂಗ್ರಸ್‌ನಲ್ಲಿ ಈಗ ಉದಿಸತೊಡಗಿದೆ. ಈ ವಿಷಯದಲ್ಲಿ ಪಕ್ಷದ ರಾಜ್ಯ ನೇತೃತ್ವ ಯಾವುದೇ ತೀರ್ಮಾನ ಕೈಗೊಳ್ಳದಿದ್ದರೂ ಸಮಸ್ಯೆ ಮುಂದೆ ಇನ್ನೂ ಬಿಗಡಾಯಿಸುವ ಸಾಧ್ಯತೆ ಇದೆ.ಹಾಗೆ ನಡೆದಲ್ಲಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವ ವಿಷಯವನ್ನು ಪರಿಶೀಲಿಸಬೇಕಾಗಿ ಬರಲಿದೆ ಎಂಬ ಪೂರ್ವ ಸುಳಿವನ್ನು ಪಕ್ಷದ ರಾಜ್ಯ ನೇತೃತ್ವ ನೀಡಿದೆ. ಮಾತ್ರವಲ್ಲ ರಾಜ್ಯ ವಿಧಾನಸಭಾ ಅಧಿವೇಶ ಮುಂದಿನ ತಿಂಗಳ 15ರಂದು ಆರಂಭಗೊಳ್ಳಲಿದೆ. ಆ ವೇಳೆ ರಾಹುಲ್‌ರ ವಿಷಯವನ್ನು ಆಡಳಿತ ಪಕ್ಷದವರು ಕೈಗೆತ್ತಿಕೊಂಡು ಕಾಂಗ್ರೆಸ್‌ನ ಮೇಲೆ ಮುಗಿಬೀಳುವುದಂತೂ ಖಂಡಿತವಾಗಿದೆ. ಇದು ಮಹಿಳೆಯರ ಘನತೆಗೆ ಸಂಬಂಧಿಸಿದ ವಿಷಯ ವಾಗಿರುವುದರಿಂದಾಗಿ ವಿಷಯ ವಿಧಾನಸಭಾ ಅಧಿವೇಶನದಲ್ಲಿ ವಿರೋಧಪಕ್ಷ ನಾಯಕ ವಿ.ಡಿ.ಸತೀಶನ್‌ರನ್ನು ತೀವ್ರ ಸಂಕಷ್ಟಕ್ಕೆ ಸಿಲುಕಿಸುವಂತೆ ಮಾಡಲಿದೆ. ಮಾತ್ರವಲ್ಲ ಬಿಜೆಪಿ ಮತ್ತು ಸಿಪಿಎಂ ರಾಹುಲ್‌ರ ರಾಜೀನಾಮೆ ಆಗ್ರಹಿಸಿ ಇನ್ನೊಂದೆಡೆ ತೀವ್ರ ಹೋರಾಟದಲ್ಲೂ ತೊಡಗಿದೆ. ಇದಕ್ಕೆಲ್ಲಾ ರಾಹುಲ್ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವುದೊಂದೇ ಏಕೈಕ ಪರಿಹಾರ ಮಾರ್ಗವಾಗಲಿದೆಯೆಂದು ಕಾಂಗ್ರೆಸ್‌ನ ಹಲವು ನೇತಾರರು ಪರೋಕ್ಷವಾಗಿ ಹೇಳತೊಡಗಿದ್ದಾರೆ.