ಕಾಸರಗೋಡು: ಲಂಚ ಸ್ವೀಕರಿ ಸಿದ ಆರೋಪದಂತೆ ವಿದ್ಯುನ್ಮಂಡ ಳಿಯ ಸಬ್ ಇಂಜಿನಿಯರ್‌ರನ್ನು ಕಾಸರಗೋ ಡು ಜಾಗ್ರತಾ ದಳ ಬಂಧಿಸಿದೆ.
ವಿದ್ಯುನ್ಮಂಡಳಿಯ ಚಿತ್ತಾರಿ ಕಚೇರಿಯ ಸಬ್ ಇಂಜಿನಿಯರ್ ಕೆ. ಸುರೇಂದ್ರನ್ (55) ಬಂಧಿತ ವ್ಯಕ್ತಿ. ಇವರು ಹೊಸದುರ್ಗ ಕಾರಾಟು ವಯಲ್ ನಿವಾಸಿಯಾಗಿದ್ದಾರೆ. ಪೂಚಕ್ಕಾಡ್ ನಿವಾಸಿಯಿಂದ 3000 ರೂ. ಲಂಚ ಸ್ವೀಕರಿಸಿದ ಆರೋಪ ದಂತೆ ಈತನನ್ನು ಬಂಧಿಸಲಾಗಿದೆ. ಪೂಚಕ್ಕಾಡ್ ನಿವಾಸಿಯಾಗಿರುವ ದೂರುಗಾರ ಮುಕ್ಕುಟಿನಲ್ಲಿ ನಿರ್ಮಿ ಸುತ್ತಿರುವ ಹೊಸ ಮನೆಗೆ ತಾತ್ಕಾಲಿಕ ವಿದ್ಯುತ್ ಸಂಪರ್ಕ ನೀಡಲು ಅವರಿಂದ ಸಬ್ ಇಂಜಿನಿಯರ್ ಲಂಚ ಕೇಳಿದರೆಂದು ಆರೋಪಿಸಲಾಗಿದೆ. ಆ ವಿಷಯವನ್ನು ಮನೆ ಮಾಲಕ ಬಳಿಕ ಜಾಗ್ರತಾ ದಳದವರಿಗೆ ತಿಳಿಸಿದ್ದರು. ಅದರಂತೆ ವಿಜಿಲೆನ್ಸ್ ಅಧಿಕಾರಿಗಳು ನೀಡಿದ ನಿರ್ದೇಶ ಪ್ರಕಾರ ಅವರು ನಿನ್ನೆ ಸಂಜೆ ಹಣವನ್ನುಸಬ್ ಇಂಜಿನಿಯರ್‌ಗೆ ನೀಡುತ್ತಿದ್ದ ವೇಳೆ ವಿಜಿಲೆನ್ಸ್ ತಂಡ ಇಂಜಿನಿಯರ್‌ರನ್ನು ಅಲ್ಲಿಂದ ಕೈಯಾರೆ ಸೆರೆಹಿಡಿದರು. ಜಾಗ್ರತಾದಳದ ಡಿವೈಎಸ್ಪಿ ಪಿ.ವಿ.ಉಣ್ಣಿಕೃಷ್ಣನ್ ನೇತೃತ್ವದಲ್ಲಿ ಇನ್ ಸ್ಪೆಕ್ಟರ್‌ಗಳಾದ ನಾರಾಯಣನ್, ಶ್ರೀಜಿತ್, ಎಸ್‌ಐ ರಾಧಾಕೃಷ್ಣನ್‌ರನ್ನೊಳಗೊಂಡ ತಂಡ ಆರೋಪಿಯನ್ನು ಬಂಧಿಸಿದೆ. ಬಂಧಿತನನ್ನು ಇಂದು ತಲಶ್ಶೇರಿ ವಿಜಿಲೆನ್ಸ್ ನ್ಯಾಯಾಲಯದಲ್ಲಿ ಹಾಜರುಪಡಿಸಲಾಗುವುದೆಂದು ಡಿವೈಎಸ್ಪಿ ತಿಳಿಸಿದ್ದಾರೆ.