ಮಧ್ಯರಾತ್ರಿ ಯುವಕ, ಸಂಬಂಧಿಕರನ್ನು ಮನೆಯಿಂದ ಹೊರಗೆ ಕರೆದು ಬಂದೂಕು ತೋರಿಸಿ ಬೆದರಿಕೆ: ನಾಲ್ಕು ಮಂದಿ ವಿರುದ್ಧ ಕೇಸು

ಮಂಜೇಶ್ವರ: ಯುವಕ ಹಾಗೂ ಸಂಬಂಧಿಕರನ್ನು ಮಧ್ಯರಾತ್ರಿ ವೇಳೆ ಮನೆಯಿಂದ ಹೊರಗೆ ಕರೆದು  ಬಂದೂಕ ತೋರಿಸಿ ಬೆದರಿಕೆಯೊಡ್ಡಿದ ಬಗ್ಗೆ ಆರೋಪವುಂಟಾಗಿದೆ. ಈ ಘಟನೆಗೆ ಸಂಬಂಧಿಸಿ  ನಾಲ್ಕು ಮಂದಿ ವಿರುದ್ಧ ಮಂಜೇಶ್ವರ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.

ನಿನ್ನೆ ರಾತ್ರಿ ೧೧.೪೫ರ ವೇಳೆ ಘಟನೆ ನಡೆದಿದೆ. ಬಂಗ್ರಮಂಜೇಶ್ವರ ಕಾಡಿಯಾರ್‌ನ ಬಸನ್ ಬಾವ ಮಂಜಿಲ್‌ನ ಮುಹಮ್ಮದ್ ಸಮೀರ್ (20) ನೀಡಿದ ದೂರಿನಂತೆ ಬಂಗ್ರಮಂ ಜೇಶ್ವರದ ರಶೀದ್ ಹಾಗೂ ಕಂಡರೆ ಪತ್ತೆಹಚ್ಚಬಹುದಾದ ಇತರ ಮೂವರ ವಿರುದ್ಧ ಕೇಸು ದಾಖಲಿಸಲಾಗಿದೆ. ರಾತ್ರಿ ಮನೆಗೆ ತಲುಪಿದ ತಂಡ ಮೊದಲು ಮುಹಮ್ಮದ್ ಸಮೀರ್ ನನ್ನು ಕರೆದೆಬ್ಬಿಸಿದೆ. ಈ ವೇಳೆ ಸಹೋದರ ಹಾಗೂ ಭಾವ ಮನೆಯಿಂದ ಹೊರಗಿಳಿದರು. ಅನಂತರ ಈ ಮೂರು ಮಂದಿಗೆ ಬಂದೂಕು ತೋರಿಸಿ ತಂಡ ಬೆದರಿಕೆಯೊಡ್ಡಿ ಮರಳಿ ದೆಯೆಂದು  ಮಂಜೇಶ್ವರ ಪೊಲೀಸರು ದಾಖಲಿಸಿ ಕೊಂಡ ಪ್ರಕರಣದಲ್ಲಿ ತಿಳಿಸಲಾಗಿದೆ.  ಬೆದರಿಕೆಯೊಡ್ಡಲು ಕಾರಣವೇನೆಂದು ತಿಳಿದುಬಂದಿಲ್ಲ. ಆರೋಪಿಗಳನ್ನು ಪತ್ತೆಹಚ್ಚಲು ಪೊಲೀಸರು ತನಿಖೆ ಆರಂಭಿಸಿದ್ದಾರೆ.

You cannot copy contents of this page