ಕುಂಬಳೆ: ಅರೆಪ್ರಜ್ಞಾವಸ್ಥೆಯಲ್ಲಿ ಕಂಡುಬಂದ ದೈವ ಕಲಾವಿದನೋ ರ್ವ ಆಸ್ಪತ್ರೆಯಲ್ಲಿ ಚಿಕಿತ್ಸೆ ಮಧ್ಯೆ ಮೃತಪಟ್ಟ ಘಟನೆ ನಡೆದಿದೆ. ಪೇರಾಲ್ ಕಣ್ಣೂರು ಚೋಡಾಲ ನಿವಾಸಿ ಮಂಚ ಎಂಬವರ ಪುತ್ರ ಉಮೇಶ (31) ಮೃತಪಟ್ಟ ವ್ಯಕ್ತಿ. ಕಳೆದ ಗುರುವಾರ ಬೆಳಿಗ್ಗೆ 11 ಗಂಟೆಗೆ ಉಮೇಶ ಶಿರಿಬಾಗಿಲು ಬಳಿಯ ಮಂಜತ್ತಡ್ಕದಲ್ಲಿ ಅರೆಪ್ರಜ್ಞಾವಸ್ಥೆಯಲ್ಲಿ ಪತ್ತೆಯಾಗಿದ್ದರು. ಕೂಡಲೇ ಅವರನ್ನು ಕಾಸರಗೋಡು ಜನರಲ್ ಆಸ್ಪತ್ರೆಗೆ ತಲುಪಿಸಲಾಗಿತ್ತು. ಸ್ಥಿತಿ ಗಂಭೀರವಾಗಿದ್ದುದರಿಂದ ವೈದ್ಯರ ನಿರ್ದೇಶ ಮೇರೆಗೆ ಪರಿಯಾರಂನ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ತಲುಪಿಸಿದರೂ ಜೀವ ರಕ್ಷಿಸಲಾಗಲಿಲ್ಲ. ಘಟನೆ ಬಗ್ಗೆ ಕಾಸರಗೋಡು ಪೊಲೀಸರು ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಮೃತರು ತಾಯಿ ಕಮಲ, ಪತ್ನಿ ಉಷ,ಪುತ್ರಿ ಚಸ್ವಷಿಣಿ, ಸಹೋದರ-ಸಹೋದರಿಯರಾದ ಜನಾರ್ದನ, ಬಾಬು, ಪುಷ್ಪ, ರವಿ , ವಿಮಲ, ಹರೀಶ, ಜಾನಕಿ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ಉಮೇಶರ ಓರ್ವ ಪುತ್ರ ಕೀರ್ತನ್ ಈ ಹಿಂದೆ ನಿಧನರಾಗಿದ್ದಾರೆ.