ಬದಿಯಡ್ಕ: ಜುಗಾರಿ ನಿರತ ಐದು ಮಂದಿಯನ್ನು ಬದಿಯಡ್ಕ ಪೊಲೀಸರು ಬಂಧಿಸಿದ್ದಾರೆ. ಬಂಧಿತರ ಕೈಯಿಂದ 11,840 ರೂಪಾಯಿ ವಶಪಡಿಸಲಾಗಿದೆ. ನಾರಾಯಣಮಂಗಲ ರಾಜೀವಗಾಂಧಿ ಕಾಲನಿಯ ಸತೀಶ್ (39), ನೆಕ್ರಾಜೆ ಅರ್ಲಡ್ಕ ನಿವಾಸಿಗಳಾದ ರಮೇಶ್ (43), ಸಂತೋಷ್ (36), ರಜಿಲೇಶ್ (39), ಪೈಕದ ಸುರೇಶ್ (41) ಎಂಬಿವರು ಬಂಧಿತ ವ್ಯಕ್ತಿಗಳಾಗಿ ದ್ದಾರೆ. ನಿನ್ನೆ ಸಂಜೆ ಪೈಕ ಅರ್ಲ ಡ್ಕದ ನೀರಿನ ಟ್ಯಾಂಕ್ ಸಮೀಪ ಇವರು ಜುಗಾರಿ ನಿರತರಾಗಿದ್ದರು. ಈ ಬಗ್ಗೆ ಮಾಹಿತಿ ಲಭಿಸಿದ ಬದಿಯಡ್ಕ ಎಸ್‌ಐ ಅಖಿಲ್ ನೇತೃತ್ವದ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ.
