ವಿಶ್ವ ಸಹೋದರತ್ವ ದಿನ ಪ್ರಯುಕ್ತ ರಕ್ತದಾನ ಶಿಬಿರ

ಕಾಸರಗೋಡು: ವಿಶ್ವ ಸಹೋದರತ್ವ ದಿನದ ಅಂಗವಾಗಿ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀ ಯ ವಿಶ್ವವಿದ್ಯಾಲಯ ಹಾಗೂ ಭಾರತಾಂಬಾ ಸೇವಾ ಪ್ರತಿಷ್ಠಾನದ ಆಶ್ರಯದಲ್ಲಿ ಕಾಸರಗೋಡು ಜನರಲ್ ಆಸ್ಪತ್ರೆ ಬ್ಲಡ್ ಬ್ಯಾಂಕ್‌ನ ಸಹಯೋಗದೊಂದಿಗೆ ರಕ್ತದಾನ ಶಿಬಿರ ನಡೆಸಲಾಯಿತು. ಅಣಂಗೂರಿ ನಲ್ಲಿರುವ ಭಾರತಾಂಬಾ ಸೇವಾ ಪ್ರತಿಷ್ಠಾನದ ಕಾರ್ಯಾಲಯದಲ್ಲಿ ನಡೆದ ಶಿಬಿರದಲ್ಲಿ ಜನರಲ್ ಆಸ್ಪತ್ರೆಯ ಬ್ಲಡ್ ಬ್ಯಾಂಕ್  ಮೆಡಿಕಲ್ ಆಫೀಸರ್ ಡಾ| ಸೌಮ್ಯ ನಾಯರ್, ಕಾಸರಗೋಡು ಈಶ್ವರೀಯ ವಿಶ್ವವಿದ್ಯಾಲಯದ ಬಿ.ಕೆ. ವಿಜಯ ಲಕ್ಷ್ಮಿ, ಅಣಂಗೂರು ಭಾರತೀಯ ಸೇವಾ ಪ್ರತಿಷ್ಠಾನದ ಅಧ್ಯಕ್ಷ ಜಯಂತ, ಸೇವಾ ಭಾರತಿಯ ದಯಾನಂದ ಭಟ್, ಬಿ.ಕೆ. ವಿನೋದ್, ಬಿ.ಕೆ. ಕವಿತ, ಬಿ.ಕೆ. ರೇಶ್ಮಾ, ಶ್ರೀನಿವಾಸ ನಾಯ್ಕ್ ಮೊದಲಾದವರು ಉಪಸ್ಥಿತರಿದ್ದರು.

RELATED NEWS

You cannot copy contents of this page