ಧರ್ಮಸ್ಥಳ ಕ್ಷೇತ್ರ ಭಕ್ತವೃಂದ ನೇತೃತ್ವದಲ್ಲಿ ನಗರದಲ್ಲಿ ಪಂಜಿನ ಮೆರವಣಿಗೆ

ಕಾಸರಗೋಡು: ಧರ್ಮಸ್ಥಳ ಕ್ಷೇತ್ರದ ಮೇಲೆ ನಡೆಯುತ್ತಿರುವ ವಿಧ್ವಂ ಸಕ ಚಟುವಟಿಕೆಗಳ ವಿರುದ್ಧವಾಗಿ ಧರ್ಮಸ್ಥಳ ಕ್ಷೇತ್ರ ಭಕ್ತವೃಂದ, ಕಾಸರಗೋಡು ಇವರ ನೇತೃತ್ವದಲ್ಲಿ ನಿನ್ನೆ ಸಂಜೆ ಕಾಸರಗೋಡು ನಗರದಲ್ಲಿ ಪಂಜಿನ ಮೆರವಣಿಗೆ ಜರುಗಿತು.
ಕಾಸರಗೋಡು ಶ್ರೀ ಮಲ್ಲಿಕಾರ್ಜುನ ಕ್ಷೇತ್ರದಿಂದ ಪ್ರಾರಂಭವಾಗಿ ಪ್ರಮುಖ ಬೀದಿಗಳ ಮೂಲಕ ಸಾಗಿದಾಗ ನೂರಾರು ಭಕ್ತರು, ಯುವಕರು ಹಾಗೂ ಸಾರ್ವಜನಿಕರು ದೀಪಗಳೊಂದಿಗೆ ಭಾಗವಹಿಸಿ ಸಮಗ್ರ ಏಕತೆ ಹಾಗೂ ಭಕ್ತಿ ಭಾವವನ್ನು ತೋರಿಸಿದರು.
ಸಮಾರೋಪ ಸಮಾರಂಭದಲ್ಲಿ ವಿವಿಧ ಸಂಘಟನೆಗಳ ಗಣ್ಯರು ಉಪಸ್ಥಿತರಿದ್ದರು. ಹಿಂದು ಐಕ್ಯ ವೇದಿಯ ಜಿಲ್ಲಾಧ್ಯಕ್ಷ ಎಸ್. ಪಿ. ಶಾಜಿ, ವಿಶ್ವ ಹಿಂದೂ ಪರಿಷತ್ತಿನ ಕಾಸರಗೋಡು ಪ್ರಖಂಡ ಗೌರವಾಧ್ಯಕ್ಷ ವೆಂಕಟ್ರಮಣ ಹೊಳ್ಳ, ಹಿಂದು ಐಕ್ಯ ವೇದಿಯ ಜಿಲ್ಲಾ ಪ್ರಧಾನ ಕಾರ್ಯ ದರ್ಶಿ ರಾಜನ್ ಮುಳಿಯಾರ್, ವಿಶ್ವ ಹಿಂದೂ ಪರಿಷತ್ತಿನ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗಣೇಶ ಮಾವಿನಕಟ್ಟೆ, ಜಿಲ್ಲಾ ಕೋಶಾಧಿಕಾರಿ ಡಾ. ಜಯಪ್ರಕಾಶ್ ನಾರಾಯಣ ತೊಟ್ಟೆತ್ತೋಡಿ, ಬಿ.ಎಂ.ಎಸ್ ಜಿಲ್ಲಾ ಜತೆ ಕಾರ್ಯದರ್ಶಿ ದಿನೇಶ್ ಬಂದ್ಯೋಡು, ಹಿಂದು ಐಕ್ಯ ವೇದಿಯ ಜಿಲ್ಲಾ ಕಾರ್ಯಧ್ಯಕ್ಷ ಗೋಪಾಲಕೃಷ್ಣನ್ ತಚ್ಚಂಗಾಡ್, ಹಿರಿಯ ಧಾರ್ಮಿಕ ಮುಖಂಡ ಜಯಾನಂದ ಹೊಸದುರ್ಗ, ವಿಶ್ವ ಹಿಂದೂ ಪರಿಷತ್ ಕಾಸರಗೋಡು ಪ್ರಖಂಡ ಅಧ್ಯಕ್ಷ ಗುರು ಪ್ರಸಾದ್ ಕೋಟೆಕಣಿ ಮಾತನಾಡಿದರು. ಧರ್ಮಸ್ಥಳ ಕ್ಷೇತ್ರದ ಭಕ್ತವೃಂದ, ವಿವಿಧ ಹಿಂದು ಸಂಘಟನೆಗಳ ಸದಸ್ಯರು, ಮಹಿಳೆಯರು, ಯುವಕರು ಹಾಗೂ ಸಾರ್ವಜನಿಕರು ಭಾಗವಹಿಸಿದರು.

RELATED NEWS

You cannot copy contents of this page