ಕಾಸರಗೋಡು: ಕಣ್ಣೂರು ವಿವಿ ಅಧೀನದಲ್ಲಿರುವ ಕಾಲೇಜುಗಳ ವಿದ್ಯಾರ್ಥಿ ಯೂನಿಯನ್ ಚುನಾವಣೆಯಲ್ಲಿ ಜಿಲ್ಲೆಯಲ್ಲಿ ಎಸ್ಎಫ್ಐ ಮುನ್ನಡೆ ಸಾಧಿಸಿದೆ. ಐದು ಸರಕಾರಿ ಕಾಲೇಜುಗಳ ಪೈಕಿ ನಾಲ್ಕರಲ್ಲಿ ಎಸ್ಎಫ್ಐ, 1ರಲ್ಲ್ಲಿ ಎಬಿವಿಪಿ ಗೆಲುವು ಸಾಧಿಸಿದೆ. ಮೂರು ಐಡೆಡ್ ಕಾಲೇಜುಗಳ ಪೈಕಿ 2ರಲ್ಲಿ ಎಸ್ಎಫ್ಐ, 1ರಲ್ಲಿ ಯುಡಿಎಸ್ಎಫ್ ಗೆಲುವು ಸಾಧಿಸಿದೆ. ಕಾಸರಗೋಡು ಸರಕಾರಿ ಕಾಲೇಜಿನಲ್ಲಿ ಎಸ್ಎಫ್ಐ, ಮಂಜೇಶ್ವರ ಗೋವಿಂದ ಪೈ ಸ್ಮಾರಕ ಸರಕಾರಿ ಕಾಲೇಜಿನಲ್ಲಿ ಎಬಿವಿಪಿ ಗೆಲುವು ಸಾಧಿಸಿದೆ.
