ವೇದಮೂರ್ತಿ ಬಜೆ ಗೋಪಾಲಕೃಷ್ಣ ಭಟ್ ನಿಧನ

ಬೋವಿಕ್ಕಾನ: ಇರಿಯಣ್ಣಿ ಸಮೀಪ ಪಯ ನಿವಾಸಿ ವೇದ ಮೂರ್ತಿ ಶ್ರೀ ಬಜೆ ಗೋ ಪಾಲಕೃಷ್ಣ ಭಟ್ (82) ನಿನ್ನೆ ರಾತ್ರಿ ಸ್ವ-ಗೃಹದಲ್ಲಿ ನಿಧನಹೊಂದಿದರು. ಪ್ರಸಿದ್ಧ ಪುರೋಹಿತರೂ, ಧಾರ್ಮಿಕ ಪಂಡಿತರೂ ಆಗಿದ್ದ ಇವರು ಊರ ಹಾಗೂ ಪರವೂರ ಕ್ಷೇತ್ರಗಳಲ್ಲಿ, ಮನೆಗಳಲ್ಲಿ ಧಾರ್ಮಿಕ ಕಾರ್ಯಕ್ರಮಕ್ಕೆ  ಪೌರೋಹಿತ್ಯದ ನೇತೃತ್ವ ವಹಿಸುತ್ತಿದ್ದರು.

ಮೃತರು ಪತ್ನಿ ಸರಸ್ವತಿ ಭಟ್, ಮಕ್ಕಳಾದ ಶ್ರೀಕೃಷ್ಣ ಭಟ್ (ನ್ಯಾಯವಾದಿ ಮಂಗಳೂರು), ಈಶ್ವರಿ ಭಟ್, ಶಾರದಾ ಭಟ್, ಶ್ಯಾಮ ಭಟ್ (ಪುರೋಹಿತರು), ಅಳಿಯ ರಾಮಕೃಷ್ಣ ಭಟ್ (ಪುನೂರುಕಜೆ ಸುಳ್ಯ), ಸೊಸೆಯಂದಿರಾದ  ಪ್ರೇಮ, ಕವಿತ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

ಇವರ ಇನ್ನೋರ್ವ ಅಳಿಯ ಕೆ. ವೆಂಕಟೇಶ್ವರ ಶರ್ಮ (ಬೆಳ್ಳಿಪ್ಪಾಡಿ, ದೇಲಂಪಾಡಿ), ಸಹೋದರಿ ಯರಾದ ಲಕ್ಷ್ಮಿ ಭಟ್, ಸುಶೀಲ ಭಟ್ ಎಂಬಿವರು ಈ ಹಿಂದೆ ನಿಧನ ರಾಗಿದ್ದಾರೆ. ಗೋಪಾಲಕೃಷ್ಣ ಭಟ್‌ರ ನಿಧನಕ್ಕೆ ಕಾಸರಗೋಡು ಬ್ರಾಹ್ಮಣ ಪರಿಷತ್ ವಾಟ್ಸಾಪ್ ಬಳಗ, ಕಾಸರಗೋಡಿನ ಕನ್ನಡಿಗರು ವಾಟ್ಸಾಪ್ ಬಳಗ ಸಂತಾಪ ಸೂಚಿಸಿದೆ.

You cannot copy contents of this page