ಪೆರ್ಲ: ಗೋಳಿತ್ತಾರು ಶ್ರೀ ಸಿದ್ಧಿ ವಿನಾಯಕ ಭಜನಾ ಮಂದಿರದಲ್ಲಿ 37 ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮ ಗಳೊಂದಿಗೆ ನಡೆಯಿತು.
ಬೆಳಿಗ್ಗೆ ದೀಪ ಪ್ರತಿಷ್ಠೆ, ಮಹೇಶ್ ಉಪಾಧ್ಯಾಯರ ಪೌರೋಹಿತ್ಯದಲ್ಲಿ ಗಣಪತಿ ಹೋಮ, ಶ್ರೀ ಸಿದ್ಧಿವಿನಾಯಕ ಭಜನಾ ಸಮಿತಿಯಿಂದ ಸಂಕೀರ್ತನೆ, ಸಾರ್ವಜನಿಕರಿಗೆ ವಿವಿಧ ಸ್ಪರ್ಧೆ ಗಳು, ಮಹಾಪೂಜೆ, ಅನ್ನಸಂತರ್ಪಣೆ, ಸಂಜೆ ನಡೆÀದ ಧಾರ್ಮಿಕ ಸಭೆಯಲ್ಲಿ ಸಮಿತಿ ಅಧ್ಯಕ್ಷ ಕಮಲಾಕ್ಷ ಪೂಜಾರಿ ಕಾನ ಅಧ್ಯಕತೆ ವಹಿಸಿದರು. ವಾರ್ಡ್ ಪ್ರತಿನಿಧಿ ಆಸೀಫ್ ಅಲಿ, ದಾಮೋದÀರ ಶೆಟ್ಟಿ ಗುರುಪುರ ಮುಖ್ಯ ಅಥಿತಿಗಳಾಗಿದ್ದರು. ಸಮಿತಿ ಸದಸ್ಯರಾದ ಸುರೇಶ ಕೆದ್ರೋಳಿ ಮಾತನಾಡಿದರು. ಬಾಬು ಪೂಜಾರಿ ಕಾನ, ಜನಾರ್ದನ ರೈ ಸೇರಾಜೆ,ಹರೀಶ್ ಸೇರಾಜೆ, ದಿವಾಕರ ನಾಯಕ್ ಇಡ್ಯಾಳ ಮೊದಲಾದವರು ಉಪಸಿತರಿದ್ದರು. ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಸಮಿತಿ ಕಾರ್ಯದರ್ಶಿ ವಿನೀತ್ ಕಾನ ಸ್ವಾಗತಿಸಿ ರವಿ ಎಸ್ ಎಂ ನಿರೂಪಿಸಿ ವಂದಿಸಿದರು. ಬಳಿಕ ಭಜನೆ ನಡೆಯಿತು.
