ಹೊಸದುರ್ಗ: ಮಾರಾಟಕ್ಕಾಗಿ ಸಾಗಿಸುತ್ತಿದ್ದ ಗಾಂಜಾ ಸಹಿತ ಯುವತಿಯನ್ನು ಅಬಕಾರಿ ತಂಡ ಬಂಧಿಸಿದೆ. ಪಯ್ಯನ್ನೂರು ಎಡಾಟ್ ನಿವಾಸಿ ಪಿ. ಪ್ರಜಿತ (29) ಎಂಬಾಕೆ ಬಂಧಿತ ಯುವತಿ. ಓಣಂ ಸ್ಪೆಷಲ್ ಡ್ರೈವ್ನಂಗವಾಗಿ ಅಬಕಾರಿ ತಂಡ ಕಾರ್ಯಾಚರಣೆ ನಡೆಸುತ್ತಿದ್ದ ವೇಳೆ ಸಂಶಯಗೊಂಡು ಯುವತಿಯನ್ನು ತಪಾಸಣೆ ನಡೆಸಿದಾಗ 12 ಗ್ರಾಂ ಗಾಂಜಾ ಪತ್ತೆಯಾಗಿದೆ.
