ಉಪ್ಪಳ: ಮಂಜೇಶ್ವರ ವಾಮಂಜೂರು ಚೆಕ್ಪೋಸ್ಟ್ ಸಮೀಪ ಮನೆಯೊಂದರಿಂದ ನಡೆದ ಕಳವು ಯತ್ನ ಪ್ರಕರಣ ದಲ್ಲಿ ಪೊಲೀಸರು ಕೇಸು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ವಾಮಂಜೂರು ಚೆಕ್ಪೋಸ್ಟ್ ಬಳಿ ರಾಷ್ಟ್ರೀಯ ಹೆದ್ದಾರಿ ಸಮೀಪವಿರುವ ಸಫಿ ಮುಮ್ತಾಜ್ ಎಂಬವರ ಮನೆಯಿಂದ ಸೋಮವಾರ ರಾತ್ರಿ ಕಳವು ಯತ್ನ ನಡೆದಿದೆ. ಮನೆಯ ಹೆಂಚು ತೆಗೆದು ಒಳ ನುಗ್ಗಿದ ಕಳ್ಳರು ಕಳವಿಗೆತ್ನಿಸಿದ್ದಾರೆ. ಮಂಗಳವಾರ ಬೆಳಿಗ್ಗೆ ಈ ಘಟನೆ ಅರಿವಿಗೆ ಬಂದಿದೆ. ಈ ಬಗ್ಗೆ ಮನೆಯವರು ನೀಡಿದ ದೂರಿ ನಂತೆ ಮಂಜೇಶ್ವರ ಪೊಲೀಸರು ಕೇಸು ದಾಖಲಿಸಿ ಕನಿಖೆ ಆರಂ ಭಿಸಿದ್ದಾರೆ. ಎಸ್ಐ ಅಜಯ್ ಎಸ್. ಮೆನೋನ್ ನೇತೃತ್ವದಲ್ಲಿ ತನಿಖೆ ನಡೆಯುತ್ತಿದೆ. ರಾಷ್ಟ್ರೀ ಯ ಹೆದ್ದಾರಿ ಕೇಂದ್ರೀಕರಿಸಿ ಕಾರ್ಯಾಚರಿಸುವ ಕಳ್ಳರ ತಂಡ ಈ ಮನೆ ಕಳವಿಗೆತ್ನಿಸಿದೆ ಎಂದು ಸಂಶಯಿಸುತ್ತಿರುವುದಾಗಿ ಪೊಲೀಸ್ ಮೂಲಗಳು ತಿಳಿಸಿವೆ.
