ಕಣ್ಣೂರು: ಇಲ್ಲಿಗೆ ಸಮೀಪದ ಅಲವಿಲಿಲ್ ಎಂಬಲ್ಲಿ ದಂಪತಿ ಬೆಂಕಿ ತಗಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಕಲ್ಲಾಳತ್ತಿಲ್ ಪ್ರೇಮರಾಜನ್, ಎ.ಕೆ. ಶ್ರೀಲೇಖ ಎಂಬಿವರು ಮೃತಪಟ್ಟವರು. ಸಚಿವ ಎ.ಕೆ. ಶಶೀಂದ್ರನ್ರ ಸಹೋದರಿಯಾಗಿದ್ದಾರೆ ಇವರು. ಮನೆಯ ಮಲಗುವ ಕೊಠಡಿಯಲ್ಲಿ ದಂಪತಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ನಿನ್ನೆ ಸಂಜೆ 5 ಗಂಟೆ ವೇಳೆ ಘಟನೆ ತಿಳಿದು ಬಂದಿದೆ. ಚಾಲಕ ಕರೆದರೂ ಬಾಗಿಲು ತೆರೆಯದ ಹಿನ್ನೆಲೆಯಲ್ಲಿ ಪರಿಶೀಲಿಸಿದಾಗ ಸುಟ್ಟು ಕರಕಲಾದ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದೆ. ಪುತ್ರ ವಿದೇಶದಿಂದ ತಲುಪುವುದಕ್ಕೆ ಗಂಟೆಗಳ ಮುಂಚಿತ ಇವರಿಬ್ಬರ ಮೃತದೇಹ ಪತ್ತೆಯಾಗಿದೆ. ಪೊಲೀಸರು ತನಿಖೆ ಆರಂಭಿಸಿದ್ದಾರೆ.
